ಶಿರಸಿ :ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿವೋರ್ವ ಸ್ಥಳದಲ್ಲೇ ದಾರುಣ ಸಾವು ಕಂಡ ಘಟನೆ ಉತ್ತರ ಕನ್ನಡದ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದಿದೆ.
ಬೈಕುಗಳ ಮುಖಾಮುಖಿ ಡಿಕ್ಕಿ, ವ್ಯಕ್ತಿ ಬಲಿ - ಬೈಕ್ ಅಪಘಾತ
ಎರಡು ಬೈಕುಗಳ ನಡುವೆ ಪರಸ್ಪರ ಡಿಕ್ಕಿಯಾಗಿ ವ್ಯಕ್ತಿವೋರ್ವ ಸಾವನ್ನಪ್ಪಿರುವ ಘಟನೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಶಿವಾನಂದ ಅಮ್ಮಣ್ಣ ಎಂದು ಗುರುತಿಸಲಾಗಿದೆ.

ಬೈಕುಗಳ ಡಿಕ್ಕಿಗೆ ವ್ಯಕ್ತಿಯೋರ್ವ ಬಲಿ
ಹಾನಗಲ್ ತಾಲೂಕು ಕ್ಯಾಸನೂರಿನ ಶಿವಾನಂದ ಅಮ್ಮಣ್ಣ ವಡ್ಡರ್ (40) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೂಲಿ ಕೆಲಸಗಾರನಾಗಿದ್ದ ಈತನಿಗೆ ಬನವಾಸಿಯ ಸಮೀಪ ಹೆಬ್ಬತ್ತಿ ಕ್ರಾಸ್ ಬಳಿ ಅಪರಿಚಿತ ಬೈಕ್ ಡಿಕ್ಕಿ ಹೊಡೆದಿದೆ.
ಇನ್ನು ಡಿಕ್ಕಿಯಾಗುತ್ತಿದ್ದಂತೆ ಮೊತ್ತೊಂದು ಬೈಕ್ ಸವಾರ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಚಂದ್ರಶೇಖರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.