ಕರ್ನಾಟಕ

karnataka

ETV Bharat / state

ಎಣ್ಣೆ ನಶೆಯಲ್ಲಿ ಬಸ್​​ಗಾಗಿ ಕಾಯುತ್ತಿದ್ದವರಿಗೆ ಗುದ್ದಿದ ಬೈಕ್ ಸವಾರ, ಐವರಿಗೆ ಗಾಯ - ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗಾಯಾಳು

ಬೈಕ್ ಸವಾರ ಕುಡಿದ ಮತ್ತಿನಲ್ಲಿ ಮೊಬೈಲ್​​ನಲ್ಲಿ ಮಾತನಾಡುತ್ತಾ ಬಂದು ರಸ್ತೆ ಬದಿ ನಿಂತಿದ್ದವರಿಗೆ ಗುದ್ದಿದ್ದಾನೆ ಎನ್ನಲಾಗಿದೆ.

bike-accident-in-karwara-five-peoples-injured
ಬಸ್​​ಗಾಗಿ ಕಾಯುತ್ತಿದ್ದವರಿಗೆ ಗುದ್ದಿದ ಬೈಕ್ ಸವಾರ

By

Published : Jan 15, 2021, 10:00 PM IST

ಕಾರವಾರ:ಕುಡಿದ ಅಮಲಿನಲ್ಲಿ ಬೈಕ್ ಚಲಾಯಿಸಿಕೊಂಡು ಬಂದ ವ್ಯಕ್ತಿಯೋರ್ವ ಬಸ್​​ಗಾಗಿ ಕಾಯುತ್ತಿದ್ದವರ ಮೇಲೆ ಹರಿಸಿದ ಪರಿಣಾಮ ಮೂವರು ಮಕ್ಕಳು ಸಹಿತ ಐವರು ಗಂಭೀರ ಗಾಯಗೊಂಡಿರುವ ಘಟನೆ ಗೋಕರ್ಣದ ಗಂಗಾವಳಿ ಬಳಿ ಇಂದು ಸಂಜೆ ನಡೆದಿದೆ.

ಇದನ್ನೂ ಓದಿ: ರಾಜ್ಯದಲ್ಲಿಂದು 708 ಮಂದಿಗೆ ಕೋವಿಡ್ ಸೋಂಕು: ಮೂವರು ಬಲಿ

ಉದಯ ನಾಯ್ಕ (10), ಶೇಖರ‌ ನಾಯ್ಕ (14), ಪ್ರಮೀಳಾ ಶೇಖರ್ ನಾಯ್ಕ (45), ಸುರೇಶ ನಾಯ್ಕ ಎಂಬ 9 ತಿಂಗಳ ಮಗು ಹಾಗೂ ಬೈಕ್ ಸವಾರ ರಾಘವೇಂದ್ರ ಗೌಡ ಗಂಭೀರ ಗಾಯಗೊಂಡಿದ್ದಾರೆ.‌

ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಗುವನ್ನು ಗೋವಾದ ಬಾಂಬೋಲಿಗೆ ಕೊಂಡೊಯ್ದಿದ್ದು, ಉಳಿದ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details