ಕರ್ನಾಟಕ

karnataka

ETV Bharat / state

ಶಿರಸಿಯಲ್ಲಿ ಅದ್ಧೂರಿಯಾಗಿ  ಜರುಗಿದ  ಭುವನೇಶ್ವರಿ ದೇವಿಯ ಮಹಾರಥೋತ್ಸವ - ಶಿರಸಿಯಲ್ಲಿ ಅದ್ಧೂರಿಯಾಗಿ ನಡೆದ ಭುವನೇಶ್ವರಿ ದೇವಿಯ ಮಹಾರಥೋತ್ಸವ

ಭುವನಗಿರಿಯ ಭುವನೇಶ್ವರಿ ದೇವಿಯ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.

Bhubaneswari Devi
ಶಿರಸಿಯಲ್ಲಿ ಅದ್ಧೂರಿಯಾಗಿ ನಡೆದ ಭುವನೇಶ್ವರಿ ದೇವಿಯ ಮಹಾರಥೋತ್ಸವ

By

Published : Feb 11, 2020, 2:16 AM IST

ಶಿರಸಿ:ಸಿದ್ದಾಪುರದಭುವನಗಿರಿಯ ಭುವನೇಶ್ವರಿ ದೇವಿಯ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಭುವನೇಶ್ವರಿ ದೇವಿ

ಬೆಳಿಗ್ಗೆಯಿಂದ ಮಹಾರಥೋತ್ಸವದ ಪೂಜಾ ವಿಧಿ ವಿಧಾನಗಳು, ಬಲಿಪೂಜೆ ನಡೆದವು. ಕನ್ನಡತಾಯಿ ಭುವನೇಶ್ವರಿ ದೇವಿಯ ವಿಗ್ರಹವನ್ನ ಮರದ ರಥದಲ್ಲಿ ಪ್ರತಿಷ್ಠಾಪಿಸಿ ರಥವನ್ನ ಎಳೆಯಲಾಯಿತು. ಕನ್ನಡಾಂಬೆಯ ದರ್ಶನ ಪಡೆಯಲು ಜನಸಾಗರ ಹರಿದುಬಂದಿತ್ತು.

ರಾತ್ರಿ ಕೂಡ ದೇವಿಯ ರಥವನ್ನು ಎಳೆಯಲಾಯಿತು. ರಥವನ್ನು ಎಳೆಯುವಾಗ ದೇವಿಗೆ ಹರಕೆ ಕಟ್ಟಿಕೊಂಡಿದ್ದ ಭಕ್ತಾದಿಗಳು ಅಕ್ಕಿ, ಬಾಳೆಹಣ್ಣು, ಕಡಲೆ ಮುಂತಾದ ವಸ್ತುಗಳನ್ನು ರಥಕ್ಕೆ ಎಸೆಯೋ ಮುಖಾಂತರ ತಮ್ಮ ಹರಕೆಯನ್ನ ತೀರಿಸಿಕೊಂಡರು.

ABOUT THE AUTHOR

...view details