ಶಿರಸಿ :ಕಳೆದ 10 ದಿನಗಳಿಂದ ಯಲ್ಲಾಪುರ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದರೂ, ಹೊಸ ಅಭಿವೃದ್ಧಿ ಯಾವುದೂ ಕಾಣುತ್ತಿಲ್ಲ. ಆದ ಕಾರಣ ಈ ಬಾರಿ ಕ್ಷೇತ್ರದ ಜನರು ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪ್ರಚಂಡ ಬಹುಮತದಿಂದ ಗೆಲ್ಲಲಿದ್ದಾರೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಭೀಮಣ್ಣ ನಾಯ್ಕ ಪ್ರಚಂಡ ಬಹುಮತದಿಂದ ಗೆಲ್ಲಲಿದ್ದಾರೆ : ಆರ್.ವಿ ದೇಶಪಾಂಡೆ - Bhimanna Naik will win by a tremendous majority said by RV Deshpande at Shirsi
ಕ್ಷೇತ್ರದಲ್ಲಿ ಅನರ್ಹರ ವಿರುದ್ಧದ ಗಾಳಿ ಬೀಸುತ್ತಿದೆ. ಕಾಂಗ್ರೆಸ್ಗೆ ದ್ರೋಹ ಮಾಡಿ ಬಿಜೆಪಿ ಸೇರಿದವರು ಈಗಾಗಲೇ ಸೋತಿದ್ದಾರೆ. ಅಧಿಕಾರ, ಹಣದ ಆಸೆಯಿಂದ ಯಾರು ಪಕ್ಷಾಂತರ ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಅನರ್ಹ ಶಾಸಕರು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
![ಭೀಮಣ್ಣ ನಾಯ್ಕ ಪ್ರಚಂಡ ಬಹುಮತದಿಂದ ಗೆಲ್ಲಲಿದ್ದಾರೆ : ಆರ್.ವಿ ದೇಶಪಾಂಡೆ Bhimanna Naik will win by a tremendous majority said by RV Deshpande](https://etvbharatimages.akamaized.net/etvbharat/prod-images/768-512-5244592-thumbnail-3x2-hrs.jpg)
ಶಿರಸಿಯಲ್ಲಿ ಮಾತನಾಡಿ, ಬಿಜೆಪಿಯವರು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾನು ಶಾಸಕನಾಗಿದ್ದಾಗ ಮಾಡಿದ ರಸ್ತೆಗಳು, ಕುಡಿಯುವ ನೀರಿನ ಯೋಜನೆಗಳೂ ಕಾಣುತ್ತಿಲ್ಲ. ಆದ ಕಾರಣ ಈ ಬಾರಿ ಇಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದರು.
ಕ್ಷೇತ್ರದಲ್ಲಿ ಅನರ್ಹರ ವಿರುದ್ಧದ ಗಾಳಿ ಬೀಸುತ್ತಿದೆ. ಕಾಂಗ್ರೆಸ್ಗೆ ದ್ರೋಹ ಮಾಡಿ ಬಿಜೆಪಿ ಸೇರಿದವರು ಈಗಾಗಲೇ ಸೋತಿದ್ದಾರೆ. ಅಧಿಕಾರ, ಹಣದ ಆಸೆಯಿಂದ ಯಾರು ಪಕ್ಷಾಂತರ ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಅನರ್ಹ ಶಾಸಕರು ಪ್ರಜಾಪ್ರಭುತ್ವಕ್ಕೆ ಮಾರಕ. ಬಿಜೆಪಿ ನಾಯಕರು ಈಗಾಗಲೇ ಸೋತಿದ್ದಾರೆ. ಆ ಕಾರಣದಿಂದ ಕೊನೆಯ ಅಸ್ತ್ರವಾಗಿ ಹಣ ಮತ್ತು ಹೆಂಡ ಹಂಚಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಆದ್ದರಿಂದ ಕ್ಷಣಿಕ ಸುಖಕ್ಕಾಗಿ ಮತದಾರ ಆಮಿಷಕ್ಕೆ ಒಳಗಾಗಬಾರದು ಎಂದರು.