ಉತ್ತರಕನ್ನಡ:ಸ್ಥಳೀಯರ ಕರೆಗೆ ಸ್ಪಂದಿಸಿದ ಭಟ್ಕಳ ತಹಶೀಲ್ದಾರ್ ಎಸ್.ರವಿಚಂದ್ರ ಅವರು, ರಸ್ತೆಯಲ್ಲಿ ಆಕಸ್ಮಿಕ ಸಾವನ್ನಪ್ಪಿ ಬಿದ್ದಿದ್ದ ಜಾನುವಾರುವಿನ ಅಂತ್ಯಕ್ರಿಯೆ ನಡೆಸಿದ್ದಾರೆ.
ರಸ್ತೆಯಲ್ಲಿ ಸಾವನ್ನಪ್ಪಿ ಬಿದ್ದಿದ್ದ ಜಾನುವಾರುವಿನ ಅಂತ್ಯಕ್ರಿಯೆ ನೆರವೇರಿಸಿದ ತಹಶೀಲ್ದಾರ್ - ಭಟ್ಕಳದ ಜಾಲಿ ರಸ್ತೆಯ ಮಾರ್ಗ
ಭಟ್ಕಳದ ಜಾಲಿ ರಸ್ತೆಯ ಮಾರ್ಗದಲ್ಲಿ ಜಾನುವಾರುವೊಂದು ಆಕಸ್ಮಿಕವಾಗಿ ಸಾವನ್ನಪ್ಪಿದ್ದರ ಬಗ್ಗೆ ಮಾಹಿತಿ ತಿಳಿದ ತಹಶೀಲ್ದಾರ್ ಎಸ್.ರವಿಚಂದ್ರ ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ,ರಸ್ತೆಯಲ್ಲಿದ್ದ ಜಾನುವಾರುವನ್ನ ಸ್ಥಳಾಂತರ ಮಾಡಿ ಅಂತ್ಯಕ್ರಿಯೆ ನಡೆಸಿದ್ದಾರೆ.

ರಸ್ತೆಯಲ್ಲಿ ಸಾವನ್ನಪ್ಪಿ ಬಿದ್ದಿದ್ದ ಜಾನುವಾರುವಿನ ಅಂತ್ಯಕ್ರಿಯೆ ನೆರವೇರಿಸಿದ ತಹಶೀಲ್ದಾರ್
ಇಲ್ಲಿನ ಭಟ್ಕಳದ ಜಾಲಿ ರಸ್ತೆಯ ಮಾರ್ಗದಲ್ಲಿ ದನವೊಂದು ಆಕಸ್ಮಿಕವಾಗಿ ಸಾವನ್ನಪ್ಪಿದ್ದರ ಬಗ್ಗೆ ಅಲ್ಲಿನ ಸ್ಥಳೀಯರು ದೂರವಾಣಿ ಕರೆ ಮಾಡಿ ತಹಶೀಲ್ದಾರ್ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ರು.
ಬಳಿಕ ಜಾಲಿ ಪಟ್ಟಣ ಪಂಚಾಯತ್ ಆರೋಗ್ಯಾಧಿಕಾರಿ ಅಜಯ್ ಭಂಡಾರಕರ ಅವರಿಗೆ ತಿಳಿಸಿ, ಪೌರ ಕಾರ್ಮಿಕರ ಸಹಾಯದಿಂದ ರಸ್ತೆಯಲ್ಲಿದ್ದ ದನವನ್ನ ಸ್ಥಳಾಂತರ ಮಾಡಿ ಅಂತ್ಯಕ್ರಿಯೆ ನಡೆಸಿದ್ದಾರೆ.