ಭಟ್ಕಳ: ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದಾಗ ಮತ್ತು ರಕ್ಷಣೆ ಅವಶ್ಯವೆನಿಸಿದಾಗ ಪೊಲೀಸ್ ಸಹಾಯ ಪಡೆಯಲು ಮಕ್ಕಳ ಸ್ನೇಹಿ ವಾತಾವರಣ ಸೃಷ್ಟಿಸಲು ಅಂಜುಮನ್ ನೂರ್ ಮಾಂಟೆಸರಿ ವಿದ್ಯಾರ್ಥಿಗಳನ್ನು ಭಟ್ಕಳ ಪೊಲೀಸ್ ಠಾಣೆಗೆ ಕರೆದಂದು ಮಕ್ಕಳಲ್ಲಿರುವ ಭಯವನ್ನು ಹೋಗಲಾಡಿಸಲಾಯಿತು.
ಭಟ್ಕಳ ಠಾಣೆಗೆ ಬಂದ ಪುಟಾಣಿ ಮಕ್ಕಳು... ಕಾರಣ ಏನು? - ಅಂಜುಮನ್ ನೂರ್ ಮೌನ್ಟೆಸರಿ ವಿದ್ಯಾರ್ಥಿಗಳೊಂದಿಗೆ ಭಟ್ಕಳ ಪೊಲೀಸರ ಕಾರ್ಯಕ್ರಮ
ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಂದಾಗ ಮತ್ತು ರಕ್ಷಣೆ ಅವಶ್ಯವೆನಿಸಿದಾಗ ಪೊಲೀಸ್ ಸಹಾಯ ಪಡೆಯಲು ಮಕ್ಕಳ ಸ್ನೇಹಿ ವಾತಾವರಣ ಸೃಷ್ಟಿಸಲು ಅಂಜುಮನ್ ನೂರ್ ಮಾಂಟೆಸರಿ ವಿದ್ಯಾರ್ಥಿಗಳನ್ನು ಭಟ್ಕಳ ಪೊಲೀಸ್ ಠಾಣೆಗೆ ಕರೆದಂದು ಮಕ್ಕಳಲ್ಲಿರುವ ಭಯವನ್ನು ಹೋಗಲಾಡಿಸಲಾಯಿತು.

ಭಟ್ಕಳ ಶಹರಾ ಠಾಣೆಗೆ ಬಂದ ಚಿಕ್ಕ ಚಿಕ್ಕ ಮಕ್ಕಳನ್ನು ಪೊಲೀಸರು ಸಂತೋಷದಿಂದ ಆಮಂತ್ರಣ ಮಾಡಿ ಪೊಲೀಸ್ ಠಾಣೆಯ ವಿವರವನ್ನು ನೀಡಿದರು. ನಂತರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಪಿ.ಎಸ್.ಐ ಹನುಮಂತಪ್ಪ ಕುಡಗುಂಟಿ, ಪೊಲೀಸರು ಎಂದರೆ ಯಾರು ಭಯಪಡಬೇಕಾದ ಅವಶ್ಯಕತೆ ಇಲ್ಲ. ನಾವೆಲ್ಲ ನಿಮ್ಮ ಗೆಳೆಯರಿದ್ದ ಹಾಗೆ. ಯಾರು ತಪ್ಪು ಕೆಲಸ ಮಾಡುತ್ತಾರೋ ಅವರಿಗೆ ನಾವು ಶಿಕ್ಷೆ ನೀಡುತ್ತೇವೆ. ನಾವೆಲ್ಲ ದಿನದ 24 ಗಂಟೆಗಳ ಕಾಲ ನಿಮ್ಮ ಸೇವೆ ಮಾಡಲಿದ್ದೇವೆ. ತಾಲೂಕಿನಲ್ಲಿ ಕೆಲವು ತಿಂಗಳಿನಿಂದ ಶರಾವತಿ ಪಡೆ ಎಂಬ ಹೊಸ ತಂಡ ನೇಮಕವಾಗಿದ್ದು ಸಮಾಜದ ಸುತ್ತಮುತ್ತ ಲೈಂಗಿಕ ದೌರ್ಜನ್ಯ ಹಾಗೂ ಇತರೆ ಸಮಸ್ಯೆ ಬಗ್ಗೆ ನಮ್ಮ ತಂಡಕ್ಕೆ ಕರೆ ಮಾಡಿ ತಿಳಿಸಬಹುದು ಎಂದರು.
ನಂತರ ಸಿ.ಪಿ.ಐ ಎಂ.ಎಸ್ ಪ್ರಕಾಶ್ ಮಾತನಾಡಿ ಚಿಕ್ಕ ಮಕ್ಕಳಿಗೆ ಉತ್ತಮ ಮಾರ್ಗದರ್ಶನದ ಅವಶ್ಯಕತೆ ಇದ್ದು. ಕಾನೂನಿನ ಪಾಠವನ್ನು ಚಿಕ್ಕ ಮಕ್ಕಳಿಗೆ ಈಗಿನಿಂದಲೇ ಹೇಳಿಕೊಟ್ಟರೆ ದೊಡ್ಡವರಾದ ಮೇಲೆ ಕಾನೂನಿನ ಪರಿಜ್ಞಾನ ಮೂಡುತ್ತದೆ. ಚಿಕ್ಕ ಮಕ್ಕಳನ್ನು ನಾವೆಲ್ಲರು ಪ್ರೀತಿಸಬೇಕು. ಅವರೇ ಮುಂದಿನ ದೇಶದ ಭವಿಷ್ಯವನ್ನು ರೂಪಿಸುತ್ತಾರೆ ಎಂದರು.