ಕರ್ನಾಟಕ

karnataka

ETV Bharat / state

ಪೌರ ಕಾರ್ಮಿಕರ ಕೈಯಲ್ಲೂ ಬ್ಯಾಟ್.. ಆಡಿ ನಲಿದಾಡಿದ ಭಟ್ಕಳ ಪುರಸಭೆಯ ಶ್ರಮಜೀವಿಗಳು.. - ಭಟ್ಕಳ ಪುರಸಭೆ ವತಿಯಿಂದ ಕ್ರೀಡಾಕೂಟ

ಭಟ್ಕಳ ಪುರಸಭೆ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಪೌರ ಕಾರ್ಮಿಕರು ಸಕ್ರಿಯವಾಗಿ ಪಾಲ್ಗೊಂಡರು.

ಪೌರ ಕಾರ್ಮಿಕರು

By

Published : Sep 23, 2019, 9:35 PM IST

ಭಟ್ಕಳ:ಪೌರ ಕಾರ್ಮಿಕರ ದಿನಾಚರಣೆ ನಿಮಿತ್ತ ತಾಲೂಕಿನ ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಜಾಲಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಭಟ್ಕಳ ಪುರಸಭೆ ವತಿಯಿಂದ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಭಟ್ಕಳ ಪುರಸಭೆ ವತಿಯಿಂದ ಪೌರ ಕಾರ್ಮಿಕರಿಗಾಗಿ ಕ್ರೀಡಾಕೂಟ..

ನಿತ್ಯ ಕೆಲಸ ಮಾಡಿ ರೋಸಿ ಹೋಗುತ್ತಿದ್ದ ಪುರುಷ ಹಾಗೂ ಮಹಿಳಾ ಪೌರ ಕಾರ್ಮಿಕರು, ಇಂದು ಬೆಳಗ್ಗೆಯಿಂದಲೇ ಕಬ್ಬಡ್ಡಿ, ಕ್ರಿಕೆಟ್, ಗೋಣಿಚೀಲ ಓಟ ಮುಂತಾದ ಕ್ರೀಡೆಗಳಲ್ಲಿ ಸಂತೋಷದಿಂದ ಪಾಲ್ಗೊಂಡರು.

ಬಳಿಕ ತಾಲೂಕಿನ ಸಹಾಯಕ ಆಯುಕ್ತರಾದ ಸಾಜೀದ್ ಅಹ್ಮದ್​ ಮುಲ್ಲಾ ಅಧ್ಯಕ್ಷತೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ದೇವರಾಜ್, ಪುರಸಭಾ ಹಿರಿಯ ಆರೋಗ್ಯಾಧಿಕಾರಿ ಸೂಜಿಯಾ ಸೋಮನ್, ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ ಹಾಗೂ ಪುರಸಭೆಯ ಹಿರಿಯ, ಕಿರಿಯ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ಇದ್ದರು.

ABOUT THE AUTHOR

...view details