ಭಟ್ಕಳ(ಉತ್ತರ ಕನ್ನಡ): ಪ್ರಥಮ ಪಿಯುಸಿ ಓದುತ್ತಿರುವ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಶಿರಾಲಿಯ ಹರಕಲಿಯಲ್ಲಿ ನಡೆದಿದೆ.
ಭಟ್ಕಳ: ಜೀವನದಲ್ಲಿ ಜಿಗುಪ್ಸೆಗೊಂಡು ಪ್ರಥಮ ಪಿಯುಸಿ ವಿದ್ಯಾರ್ಥಿನಿ ನೇಣಿಗೆ ಶರಣು - Bhatkala Crime News Update
ಭಟ್ಕಳ ತಾಲೂಕಿನ ಶಿರಾಲಿಯ ಹರಕಲಿಯಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಯುವತಿಯೊಬ್ಬಳು ಮನೆಯ ಪಕ್ಕದಲ್ಲಿರುವ ಬಾತ್‌ರೂಮ್‌ನಲ್ಲಿರುವ ಕಬ್ಬಿಣದ ಹುಕ್ಕಿಗೆ ಚೂಡಿದಾರದ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಯುವತಿ ಶಿಲ್ಪಾ ಪರಮೇಶ್ವರ ನಾಯ್ಕ(17) ವರ್ಷ ಎಂದು ಗುರುತಿಸಲಾಗಿದೆ. ಈಕೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಪಕ್ಕದಲ್ಲಿರುವ ಬಾತ್‌ರೂಮ್‌ನಲ್ಲಿರುವ ಕಬ್ಬಿಣದ ಹುಕ್ಕಿಗೆ ಚೂಡಿದಾರದ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಕೂಡ ನಡೆಸಲಾಗಿದೆ. ಈ ಬಗ್ಗೆ ಯುವತಿಯ ಅಣ್ಣ ಮಹೇಶ ಪರಮೇಶ್ವರ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು, ಸದ್ಯ ಪಿಎಸ್ಐ ಹೆಚ್. ಓಂಕಾರಪ್ಪ ತನಿಖೆ ಕೈಗೊಂಡಿದ್ದಾರೆ.