ಕರ್ನಾಟಕ

karnataka

By

Published : Sep 25, 2020, 9:20 PM IST

ETV Bharat / state

ಟೋಲ್​ನಲ್ಲಿ ಹಂಪು ತೆರವುಗೊಳಿಸದೇ ರೋಗಿಯ ಪ್ರಾಣದೊಂದಿಗೆ ಚೆಲ್ಲಾಟ: ಆಂಬ್ಯುಲೆನ್ಸ್ ಚಾಲಕರ ಆಕ್ರೋಶ

ಆಂಬ್ಯುಲೆನ್ಸ್ ಚಾಲಕರೊಂದಿಗೆ ಅಸಂಬದ್ಧವಾಗಿ ಮಾತನಾಡಿದ ಟೋಲ್ ಗೇಟ್ ಸಿಬ್ಬಂದಿ ವಿರುದ್ಧ ಆಂಬ್ಯುಲೆನ್ಸ್ ಚಾಲಕರು ಪ್ರತಿಭಟಿಸಿದ ಘಟನೆ ಶಿರೂರು ಟೋಲ್ ಗೇಟ್ ಬಳಿ ನಡೆದಿದೆ.

Bhatkala: Ambulance Drivers protest at Shirur toll gate
ಟೋಲ್​ ನಲ್ಲಿ ಹಂಪು ತೆರವುಗೊಳಿಸದೇ ಪ್ರಾಣದೊಂದಿಗೆ ಚಲ್ಲಾಟ: ಅಂಬ್ಯುಲೆನ್ಸ್ ಚಾಲಕರ ಆಕ್ರೋಶ

ಭಟ್ಕಳ: ಟೋಲ್ ಗೇಟ್​ನಲ್ಲಿ ಆಂಬ್ಯುಲೆನ್ಸ್ ಚಾಲಕರೊಂದಿಗೆ ಅಸಂಬದ್ಧವಾಗಿ ಮಾತನಾಡಿದ ಸಿಬ್ಬಂದಿ ವಿರುದ್ಧ ಆಂಬ್ಯುಲೆನ್ಸ್ ಚಾಲಕರು ಪ್ರತಿಭಟಿಸಿದ ಘಟನೆ ಶಿರೂರು ಟೋಲ್ ಗೇಟ್ ಬಳಿ ನಡೆದಿದೆ.

ಶಿರೂರು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಇರುವ ಟೋಲ್ ಗೇಟಿನ‌ ಒಂದು ಬದಿಯಲ್ಲಿ ತುರ್ತು ಓಡಾಟಕ್ಕೆ ಅನುಕೂಲವಾಗಲು ಮಾರ್ಗ ಇದೆ. ಆ ಮಾರ್ಗದಲ್ಲಿ ಐಆರ್​ಬಿ ಅವರು ಹಂಪ್ ನಿರ್ಮಿಸಿದ್ದಾರೆ. ಹೀಗಾಗಿ ತುರ್ತಾಗಿ ಉಡುಪಿ, ಮಂಗಳೂರು ಕಡೆ ತೆರಳುವ ರೋಗಿಗಳಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ಸಂಬಂಧಪಟ್ಟ ಕಂಪನಿಯವರಿಗೆ ಮನವಿ ಮಾಡಿದರೂ ಹಂಪ್ ತೆರವುಗೊಳಿಸಲಿಲ್ಲ. ಹೀಗೆ ರೋಗಿಗಳ ಜೀವ ಹೋಗುವ ಪರಿಸ್ಥಿತಿ ಇದ್ದರೂ ನಿರ್ಲಕ್ಷ್ಯ ಧೋರಣೆ ತಳೆದಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಟೋಲ್​ ನಲ್ಲಿ ಹಂಪು ತೆರವುಗೊಳಿಸದೇ ಪ್ರಾಣದೊಂದಿಗೆ ಚೆಲ್ಲಾಟ: ಆಂಬ್ಯುಲೆನ್ಸ್ ಚಾಲಕರ ಆಕ್ರೋಶ

ಮತ್ತೊಂದೆಡೆ ಚಾಲಕರೊಂದಿಗೆ ಟೋಲ್ ಗೇಟ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿ ತೊಂದರೆ ಕೊಟ್ಟಿದ್ದರಿಂದ ಚಾಲಕರೆಲ್ಲ ಸೇರಿ ಮ್ಯಾನೇಜರ್ ಅವರನ್ನು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮ್ಯಾನೇಜರ್, ಸಿಬ್ಬಂದಿ ವರ್ತನೆಯಿಂದ ತೊಂದರೆಯಾಗಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಆಂಬ್ಯುಲೆನ್ಸ್ ಚಾಲಕರಿಗೆ ತೊಂದರೆ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಅಲ್ಲದೇ ಆಂಬ್ಯುಲೆನ್ಸ್ ಸಂಚರಿಸುವ ಮಾರ್ಗದಲ್ಲಿ ಹಾಕಿದ ಹಂಪ್ ಇಂದೇ ತೆಗೆಯುವುದಾಗಿಯೂ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಚಾಲಕರಾದ ಅಮಾನುಲ್ಲಾ, ನಾಗಭೂಷಣ್, ಮುಷ್ತಾಕ್, ಶಬೀರ್, ವಿನಾಯಕ ನಾಯ್ಕ, ಸಫೀ, ಅಶ್ಪಕ್ ಮುಂತಾದವರು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details