ಕಾರವಾರ: ರಾಜ್ಯದ ಪ್ರತಿಷ್ಠಿತ ಅರ್ಬನ್‍ಕೋ-ಅಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಟ್ಕಳ ಅರ್ಬನ್‍ಕೋ-ಅಪರೇಟಿವ್ ಬ್ಯಾಂಕಿನ 55ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯು ರಾಮನಾಥ ಸಭಾ ಭವನದಲ್ಲಿ ನಡೆಯಿತು.
5 ಕೋಟಿ ನಿವ್ವಳ ಲಾಭ ಗಳಿಸಿದ ಭಟ್ಕಳ ಅರ್ಬನ್‍ಕೋ-ಅಪರೇಟಿವ್ ಬ್ಯಾಂಕ್ - ಭಟ್ಕಳ ನ್ಯೂಸ್
ಮಾರ್ಚ್ 2019 ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ನಮ್ಮ ಬ್ಯಾಂಕು ರೂ.5 ಕೋಟಿ 7 ಲಕ್ಷ ನಿರ್ವಹಣಾ ಲಾಭಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರು ಮಾಹಿತಿ ನೀಡಿದರು.
![5 ಕೋಟಿ ನಿವ್ವಳ ಲಾಭ ಗಳಿಸಿದ ಭಟ್ಕಳ ಅರ್ಬನ್‍ಕೋ-ಅಪರೇಟಿವ್ ಬ್ಯಾಂಕ್](https://etvbharatimages.akamaized.net/etvbharat/prod-images/768-512-4517353-thumbnail-3x2-nin.jpg)
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆ ಬ್ಯಾಂಕಿನ ಪ್ರಗತಿಯ ವರದಿಯನ್ನು ಮಂಡಿಸಿ, ಮಾರ್ಚ್ 2019 ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ನಮ್ಮ ಬ್ಯಾಂಕು ರೂ. 5 ಕೋಟಿ 7 ಲಕ್ಷ ನಿರ್ವಹಣಾ ಲಾಭಗಳಿಸಿದೆ. ರೂ.1 ಕೋಟಿ 47 ಲಕ್ಷ ಆದಾಯಕರ ಪಾವತಿಯ ನಂತರ ವರ್ಷಾಂತ್ಯಕ್ಕೆ ಬ್ಯಾಂಕು ರೂ. 3 ಕೋಟಿ 61 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕಿನ ಸಹಾಯಕ ಪ್ರಧಾನ ಕಾರ್ಯನಿರ್ವಾಹಕ ಶಂಭು ಎನ್. ಹೆಗಡೆ ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ನಡಾವಳಿಗಳನ್ನು ಓದಿದರು. ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.