ಕರ್ನಾಟಕ

karnataka

ETV Bharat / state

ಭಟ್ಕಳ - ತಿರುಪತಿ ನೂತನ ಬಸ್​ಗೆ ಶಾಸಕ ಸುನೀಲ್​​ ನಾಯ್ಕ​ ಚಾಲನೆ - ಭಟ್ಕಳ-ತಿರುಪತಿ ನೂತನ ಬಸ್

ಭಟ್ಕಳ - ತಿರುಪತಿಗೆ ಸಂಚರಿಸುವ ನೂತನ ಎರಡು ಕೆಎಸ್​ಆರ್​ಟಿಸಿ ಬಸ್​ಗೆ ಶಾಸಕ ಸುನೀಲ್​ ನಾಯ್ಕ ಚಾಲನೆ ನೀಡಿದರು.

Bhatkal-Tirupati New bus inauguration
ಭಟ್ಕಳ-ತಿರುಪತಿ ನೂತನ ಬಸ್​ಗೆ ಚಾಲನೆ

By

Published : Dec 30, 2019, 3:21 PM IST

ಭಟ್ಕಳ:ಭಟ್ಕಳ-ತಿರುಪತಿಗೆ ಸಂಚರಿಸುವ ನೂತನ ಎರಡು ಕೆಎಸ್​ಆರ್​ಟಿಸಿ ಬಸ್​ಗೆ ಶಾಸಕ ಸುನೀಲ್​ ನಾಯ್ಕ ಚಾಲನೆ ನೀಡಿದರು.

ಭಟ್ಕಳ-ಕೊಲ್ಲೂರು-ಹೊಸನಗರ-ಶಿವಮೊಗ್ಗ-ಬೆಂಗಳೂರು-ಚಿತ್ತೂರು ಮಾರ್ಗವಾಗಿ ಬಸ್ ಸಂಚರಿಸಲಿದೆ. ಇದೇ ವೇಳೆ ಶಾಸಕ ಸುನೀಲ್​ ನಾಯ್ಕ ಬಸ್​ ಚಲಾಯಿಸಿ ಗಮನ ಸೆಳೆದರು.

ಬಸ್​ ಚಲಾಯಿಸಿದ ಶಾಸಕ ಸುನೀಲ ನಾಯ್ಕ

ಶಾಸಕ ಸುನೀಲ್​ ನಾಯ್ಕ ಮಾತನಾಡಿ, ಭಟ್ಕಳ-ತಿರುಪತಿ ಬಸ್​ ನೀಡಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಭಟ್ಕಳದಲ್ಲಿರುವ ಎಲ್ಲ ಬಸ್​ಗಳ ಬದಲಾವಣೆಗೆ ಮನವಿ ಪತ್ರ ಸಲ್ಲಿಸಿದ್ದೇನೆ. ಹೊಸ ಬಸ್​ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ಹೊಸ ಬಸ್​ಗಳನ್ನು ಭಟ್ಕಳಕ್ಕೆ ತರುವ ಭರವಸೆಯನ್ನು ನೀಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಟ್ಕಳ-ತಿರುಪತಿ ನೂತನ ಬಸ್​ಗೆ ಚಾಲನೆ

ಭಟ್ಕಳ ಡಿಪೋ ಮ್ಯಾನೇಜರ್,​ ಬಸ್​ ಚಾಲಕರು, ತಾಲೂಕು ಪಂಚಾಯ್ತಿ ಸದಸ್ಯ ಹನುಮಂತ ನಾಯ್ಕ, ಭಟ್ಕಳ ಬಿಜೆಪಿ ಘಟಕದ ಅಧ್ಯಕ್ಷ ಸುಬ್ರಾಯ ದೇವಾಡಿಗ, ಬಿಜೆಪಿ ಮುಖಂಡರಾದ ಕೃಷ್ಣ ನಾಯ್ಕ, ಗೋವಿಂದ ನಾಯ್ಕ, ದಿನೇಶ ನಾಯ್ಕ, ಕೇದಾರ ಕೊಲ್ಲೇ, ಶಿವಾನಿ ಶಾಂತರಾಮ ಮುಂತಾದವರು ಉಪಸ್ಥಿತರಿದ್ದರು.

ABOUT THE AUTHOR

...view details