ಭಟ್ಕಳ : ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನಕ್ಕೆ ಭಟ್ಕಳದ ತಾಲೂಕಾಸ್ಪತ್ರೆ ಕೈ ಜೋಡಿಸಿದ್ದು, ಇಂದಿನಿಂದ ಪ್ರತಿ ಭಾನುವಾರದಂದು ನಡೆಯುವ ಸ್ವಚ್ಛತಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.
'ಸ್ವಚ್ಛ ಭಾರತ್'ಗೆ ಕೈ ಜೋಡಿಸಿದ ತಾಲೂಕಾಸ್ಪತ್ರೆ... ಇಂದಿನಿಂದಲೇ ಸ್ವಚ್ಛತಾ ಕಾರ್ಯ ಶುರು - Swacch Bharath Abhiyan
ಸ್ವಚ್ಛ ಭಾರತ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನಕ್ಕೆ ಭಟ್ಕಳದ ತಾಲೂಕಾಸ್ಪತ್ರೆ ಕೈ ಜೋಡಿಸಿದೆ. ಪ್ರತಿ ಭಾನುವಾರದಂದು ತಾಲೂಕಿನ ಕೆಲ ಸಂಘಟನೆಗಳ ಸಹಭಾಗಿತ್ವದಲ್ಲಿ ಆಸ್ಪತ್ರೆಯ ಸುತ್ತ ಮುತ್ತಲಿನ ಆವರಣವನ್ನು ಸ್ವಚ್ಛತೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಹೌದು ಭಟ್ಕಳದ ತಾಲೂಕಾಸ್ಪತ್ರೆಗೆ ಬರುವ ರೋಗಿಗಳು ಆಸ್ಪತ್ರೆಯ ಸುತ್ತಮುತ್ತಲಿನ ಆವರಣ ನೋಡಿ ಮೂಗು ಮುರಿಯಬಾರದೆಂಬ ಕಾರಣಕ್ಕೆ ಆಸ್ಪತ್ರೆಯ ಆವರಣ ಸುಂದರವಾಗಿಟ್ಟುಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಸ್ವಚ್ಛ ಭಾರತ್ ಯೋಜನೆಗೆ ಇಲ್ಲಿನ ತಾಲೂಕಾಸ್ಪತ್ರೆ ಕೈ ಜೋಡಿಸಿದೆ.
ಪ್ರತಿ ಭಾನುವಾರದಂದು ತಾಲೂಕಿನ ಕೆಲವೊಂದು ಸಂಘಟನೆಗಳ ಸಹಭಾಗಿತ್ವದಲ್ಲಿ ತಾಲೂಕಾಸ್ಪತ್ರೆಯ ಸುತ್ತ ಮುತ್ತಲಿನ ಆವರಣವನ್ನು ಸ್ವಚ್ಛತೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಮೊದಲ ದಿನವಾದ ಇಂದು ಶೋಟೋಕಾನ್ ಕರಾಟೆ ಇನ್ಸ್ಸ್ಟಿಟ್ಯೂಟ್ ಭಟ್ಕಳ ಇವರ ಸಹಭಾಗಿತ್ವದಲ್ಲಿ ತಾಲೂಕಾಸ್ಪತ್ರೆಯ ಗಾರ್ಡನ್ ಭಾಗವನ್ನು ಸ್ವಚ್ಛ ಮಾಡುವುದರ ಮೂಲಕ ಶ್ರಮದಾನವನ್ನು ಮಾಡಿದರು.ಇನ್ನು ಈ ಸಂದರ್ಭದಲ್ಲಿ ಶೋಟೋಕಾನ್ ಕರಾಟೆ ಇನ್ಸ್ಸ್ಟಿಟ್ಯೂಟ್ನ ಆರು ವರ್ಷದ ಚಿಕ್ಕ ಮಕ್ಕಳು ಸಹಾ ಶ್ರಮದಾನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.