ಭಟ್ಕಳ: ಪ್ರಧಾನ ಮಂತ್ರಿಗಳು ಮಹಾತ್ಮಾ ಗಾಂಧೀಜಿಯವರ ಸ್ವಚ್ಛ ಮತ್ತು ಆರೋಗ್ಯಕರ ಭಾರತದ ಕನಸನ್ನು ಈಡೇರಿಸುವ ಉದ್ದೇಶದಿಂದ ದೇಶದಲ್ಲೆಡೆ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದ್ದಾರೆ. ಇದಕ್ಕೆ ಕೈ ಜೋಡಿಸುವಂತೆ ಇಂದು ಭಟ್ಕಳದ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನಲ್ಲಿ ಕೊಂಕಣ ರೈಲ್ವೆ ಅಧಿಕಾರಿಗಳಿಂದ ಸ್ವಚ್ಛತೆ ಕಾರ್ಯಕ್ರಮ ನಡೆಸಿದರು.
ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಕಸ ಗುಡಿಸಿದ ಅಧಿಕಾರಿಗಳು, ಸ್ವಚ್ಛತೆಗೆ ಜೈ ಎಂದ ಕೊಂಕಣ ರೈಲ್ವೆ - ಕಟ್ಟೆವೀರ ಯುವಕ ಸಂಘ
ಪ್ರಧಾನ ಮಂತ್ರಿಗಳು ಮಹಾತ್ಮಾ ಗಾಂಧೀಜಿಯವರ ಸ್ವಚ್ಛ ಮತ್ತು ಆರೋಗ್ಯಕರ ಭಾರತದ ಕನಸನ್ನು ಈಡೇರಿಸುವ ಉದ್ದೇಶದಿಂದ ದೇಶದಲ್ಲೆಡೆ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದ್ದಾರೆ. ಇದಕ್ಕೆ ಕೈ ಜೋಡಿಸುವಂತೆ ಇಂದು ಭಟ್ಕಳದ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನಲ್ಲಿ ಕೊಂಕಣ ರೈಲ್ವೆ ಅಧಿಕಾರಿಗಳಿಂದ ಸ್ವಚ್ಛತೆ ಕಾರ್ಯಕ್ರಮವನ್ನು ನಡೆಸಲಾಗಿದೆ.
ಭಟ್ಕಳ ರೈಲ್ವೆ ನಿಲ್ದಾಣದ ಅಧಿಕಾರಿಗಳಿಂದ ಜರುಗಿತು ಸ್ವಚ್ಛತೆ ಕಾರ್ಯಕ್ರಮ.
ಇಲ್ಲಿನ ಮುಟ್ಟಳ್ಳಿಯ ಕಟ್ಟೆವೀರ ಯುವಕ ಸಂಘದ ಸಹಾಯ ಪಡೆದು ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಅಧಿಕಾರಿಗಳು ಸೇರಿ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನಲ್ಲಿ ಮತ್ತು ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಇಂದು ಸ್ವಚ್ಛತೆ ಕಾರ್ಯಕ್ರಮ ನಡೆಸಿದರು.