ಭಟ್ಕಳ :ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯದ (ಐಎಸ್‌ಕೆಪಿ) ಶ್ರೇಣಿಯಲ್ಲಿ ಉನ್ನತ ಸ್ಥಾನದಲ್ಲಿದ್ದ ಪ್ರಮುಖ ಐಸಿಸ್ ಕಾರ್ಯಕರ್ತ ಉಫ್ರಿ ಜವಾಹರ್ ದಾಮುದಿ ಅಲಿಯಾಸ್ ಅಬು ಹಾಜಿರ್ ಅಲ್ ಬದರಿಯನ್ನು ಶುಕ್ರವಾರ ಭಟ್ಕಳದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ರಾಜ್ಯ ಪೊಲೀಸರ ನೇತೃತ್ವದ ತಂಡ, ಸಂಘಟಿತ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಅಲ್ಲದೆ, ಉಫ್ರಿಯ ಪ್ರಮುಖ ಸಹಚರ ಅಮೀನ್ ಜುಹೈಬ್‌ನನ್ನು ಕೂಡ ಬಂಧಿಸಲಾಗಿದೆ.
ಐಸಿಸ್ ಪ್ರಚಾರ ಮಾಸಿಕ ಆನ್‌ಲೈನ್ ನಿಯತಕಾಲಿಕೆ 'ವಾಯ್ಸ್ ಆಫ್ ಹಿಂದ್'ನ ಉತ್ಪಾದನೆ ಮತ್ತು ಪ್ರಸರಣದಲ್ಲಿ ಸಕ್ರಿಯ ಪಾತ್ರದಿಂದಾಗಿ ಏಪ್ರಿಲ್ 2020ರಿಂದ ಬದರಿ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ನಿಗಾ ಇರಿಸಿದ್ದವು. ಐಸಿಸ್ ಪ್ರಚಾರ ಮತ್ತು ಮಾಧ್ಯಮ ಚಟುವಟಿಕೆಗಳ ಹೊರತಾಗಿ, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಖರೀದಿ, ಮುಜಾಹಿದ್ದೀನ್‌ಗಳಿಗೆ ನಿಧಿಸಂಸ್ಥೆ ಮತ್ತು ನೇಮಕಾತಿ ಸೇರಿ ಲಾಜಿಸ್ಟಿಕಲ್ ಬೆಂಬಲವನ್ನು ಇವರು ನೋಡಿಕೊಂಡಿದ್ದರು.
ಇಸ್ಲಾಮಿಕ್ ಸ್ಟೇಟ್ ನಾಯಕರೊಂದಿಗೆ ನೇರ ಸಂಪರ್ಕ
ಇವರು ಖೋರಾಸನ್ (ಅಫ್ಘಾನಿಸ್ತಾನ) ಮತ್ತು ಸಿರಿಯಾದ ಇಸ್ಲಾಮಿಕ್ ಸ್ಟೇಟ್ ನಾಯಕರೊಂದಿಗೆ ನೇರ ಸಂಪರ್ಕದಲ್ಲಿದ್ದರು. ತಮ್ಮ ಸೈಬರ್ ಸಂಪರ್ಕಗಳ ಮೂಲಕ ಕುಫಾರ್‌ಗಳನ್ನು (ಅಪನಂಬಿಕೆದಾರರು), ಪೊಲೀಸ್ ಸಿಬ್ಬಂದಿ, ಪತ್ರಕರ್ತರನ್ನು ಕೊಲ್ಲಲು ಮತ್ತು ದೇವಸ್ಥಾನಗಳು ಮತ್ತು ಸರ್ಕಾರಿ ಆಸ್ತಿಗಳಿಗೆ ಹಾನಿಯನ್ನುಂಟು ಮಾಡಲು ಪ್ರೇರೇಪಿಸುತ್ತಿದ್ದರು ಎಂದು ಹೇಳಲಾಗಿದೆ.
ಗುಪ್ತಚರ ಸಂಸ್ಥೆಗಳ ಕಣ್ಣಿಗೆ ಮಣ್ಣು
ಸೈಬರ್ ಸ್ಪೇಸ್‌ನಲ್ಲಿ ತಾವು ಖೋರಾಸನ್, ಆಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ನೆಲೆಸಿದ್ದಾಗಿ ಹೇಳಿಕೊಂಡಿದ್ದು, ಗುಪ್ತಚರ ಸಂಸ್ಥೆಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಎಲ್ಲಾ ಭದ್ರತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೂ ಭದ್ರತಾ ಸಂಸ್ಥೆಗಳು ಬದರಿ ಭಾರತದಲ್ಲೇ ವಾಸಿಸುತ್ತಿರಬಹುದು ಎಂದು ನಿರ್ಣಯಿಸಿದ್ದರು.
ದಾಮುದಿ ಹಾಜಿರ್ ಒಬ್ಬನೇ ಎಂದು ಖಾತ್ರಿ
ಈ ಮೌಲ್ಯಮಾಪನದ ಆಧಾರದ ಮೇಲೆ ಮತ್ತು ಜುಲೈ 11ರಂದು ಬಂಧಿತನಾಗಿದ್ದ ಖಾಸಿಂ ಖುರಸಾನಿ ಮೈತ್ರಿ ಉಮರ್ ನಿಸಾರ್‌ನ ಬಹಿರಂಗಪಡಿಸುವಿಕೆಯ ಮೂಲಕ ಉಂಟಾದ ಕೆಲವು ಬೆಳವಣಿಗೆಗಳಿಂದ ಹಾಗೂ ವಿದೇಶಿ ಏಜೆನ್ಸಿಗಳ ಸಹಕಾರದಲ್ಲಿ ಮತ್ತಷ್ಟು ಗುಪ್ತಚರವನ್ನು ನೇಮಿಸಲಾಗಿತ್ತು. ಭಟ್ಕಳ ಮೂಲದ ಜುಫ್ರಿ ಜವಾಹರ್ ದಾಮುದಿ ಎಂದು ಗುರುತಿಸಿಕೊಂಡಿರುವವನೇ ಅಬು ಹಾಜಿರ್ ಅಲ್ ಬದ್ರಿ ಎನ್ನುವುದನ್ನು ಎನ್‌ಐಎ ಖಚಿತಪಡಿಸಿದೆ.
ದಾಮೂದಿ ಸಹಚರರ ಪತ್ತೆ
ಚುರುಕಿನ ಕಾರ್ಯಾಚರಣೆಯ ಮೂಲಕ ಭದ್ರತಾ ಸಂಸ್ಥೆಗಳು ಭಟ್ಕಳದಲ್ಲಿ ದಾಮೂದಿ (30) ಮತ್ತು ಆತನ ಸಹಚರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಜುಫ್ರಿ ಜವಾಹರ್ ದಾಮುದಿಯು ಅದ್ನಾನ್ ಹಸನ್ ದಾಮುದಿಯ ಕಿರಿಯ ಸಹೋದರನೆಂದು ದೃಢಪಡಿಸಲಾಗಿದೆ. ಅದ್ನಾನ್ ಐಸಿಸ್ ಸಂಬಂಧಿತ ಪ್ರಕರಣಗಳಲ್ಲಿ 2017ರಲ್ಲಿ ಎನ್‌ಐಎ ಬಂಧಿಸಲ್ಪಟ್ಟಿದ್ದ.
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮೂಲದ ಐಎಸ್ ಜೊತೆ ಲಿಂಕ್