ಭಟ್ಕಳ: ಶನಿವಾರ ರಾತ್ರಿ ತಾಲೂಕಿನ ಆಜಾದ್ ನಗರದಲ್ಲಿ ಅಪಹರಣಕ್ಕೊಳಗಾದ 8 ವರ್ಷದ ಬಾಲಕ ಗೋವಾ ಕ್ಯಾಲಂಗುಟ್ ಬೀಚ್ನಲ್ಲಿ ಪತ್ತೆಯಾಗಿದ್ದಾನೆ. ನಿನ್ನೆ ರಾತ್ರಿ ಸಿಪಿಐ ದಿವಾಕರ ನೇತೃತ್ವದಲ್ಲಿ ಬಾಲಕನನ್ನು ಅಪಹರಣಕಾರರಿಂದ ರಕ್ಷಿಸಿ ಭಟ್ಕಳಕ್ಕೆ ಕರೆ ತರಲಾಗಿದೆ. ಇಬ್ಬರು ಸಂಬಂಧಿಕರೇ ಕೃತ್ಯ ಎಸಗಿದ್ದು ಪೊಲೀಸರು ಬಂಧಿಸಿದ್ದಾರೆ.
ಸಂಬಂಧಿಕರಿಂದಲೇ ಅಪಹರಣಕ್ಕೊಳಗಾದ ಭಟ್ಕಳದ ಬಾಲಕನ ರಕ್ಷಣೆ, ಇಬ್ಬರ ಬಂಧನ - ಭಟ್ಕಳದ ಬಾಲಕ ಗೋವಾ ಕ್ಯಾಲಂಗುಟ್ ಬೀಚ್ನಲ್ಲಿ ಪತ್ತೆ
ಅಪಹರಣಕ್ಕೊಳಗಾದ ಬಾಲಕನನ್ನು 24 ಗಂಟೆಯೊಳಗೆ ಪತ್ತೆ ಹಚ್ಚುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಅಪಹರಣಕ್ಕೊಳಗಾದ ಭಟ್ಕಳದ ಬಾಲಕ ಗೋವಾ ಕ್ಯಾಲಂಗುಟ್ ಬೀಚ್ನಲ್ಲಿ ಪತ್ತೆ
ಪ್ರಕರಣದ ಹಿನ್ನೆಲೆ:ಭಟ್ಕಳ ತಾಲೂಕಿನ ಆಜಾದ್ ನಗರದಲ್ಲಿ ಶನಿವಾರ ರಾತ್ರಿ ಅಲಿ ಸಾದಾ ಎಂಬ 8 ವರ್ಷದ ಬಾಲಕನನ್ನು ಅಪಹರಿಸಲಾಗಿತ್ತು. ಅಕ್ಕಪಕ್ಕದ ಮನೆಗಳ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಮಾರುತಿ ಇಕೋ ವ್ಯಾನ್ನಲ್ಲಿದ್ದ ವ್ಯಕ್ತಿಯೋರ್ವ ಇಳಿದು ಬಾಲಕನನ್ನು ಎತ್ತಿಕೊಂಡು ಪರಾರಿಯಾಗಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಾಹಿತಿ ಲಭಿಸಿದ ಕೂಡಲೇ ಪೊಲೀಸರು ಶೋಧ ಕಾರ್ಯಾರಂಭಿಸಿದ್ದರು.