ಕರ್ನಾಟಕ

karnataka

ETV Bharat / state

ಕೊರೊನಾತಂಕ: ಭಟ್ಕಳದಲ್ಲಿ ಬಸ್​​ಗಳಿಗೆ ಪ್ರಯಾಣಿಕರೇ ಇಲ್ಲ!

ಲಾಕ್​ಡೌನ್​ ಸಡಿಲಿಕೆ ಬಳಿಕ ಎಲ್ಲೆಡೆ ಬಸ್​ ಸಂಚಾರ ಆರಂಭಗೊಂಡಿದೆ. ಆದರೆ ಭಟ್ಕಳದಲ್ಲಿ ಬಸ್​ ಸೇವೆ ಆರಂಭವಾದರೂ ಪ್ರಯಾಣಿಕರ ಕೊರತೆ ಎದುರಿಸುವಂತಾಗಿದೆ. ಇದರಿಂದಾಗಿ ಹೊರ ಜಿಲ್ಲೆ ಹಾಗೂ ತಾಲೂಕುಗಳಿಗೆ ತೆರಳಬೇಕಾಗಿದ್ದ ಬಸ್​​ಗಳು ಪ್ರಯಾಣಿಕರಿಲ್ಲದೆ ಡಿಪೋದಲ್ಲಿಯೇ ನಿಲ್ಲುವಂತಾಗಿದೆ.

Bhatkal faces corona effect: taluk feels Empty buses without passengers
ಭಟ್ಕಳದಲ್ಲಿ ಮರೆಯಾಗದ ಕೊರೊನಾತಂಕ: ಪ್ರಯಾಣಿಕರಿಲ್ಲದೆ ಖಾಲಿ ನಿಂತ ಬಸ್​​ಗಳು

By

Published : Jun 3, 2020, 5:44 PM IST

ಭಟ್ಕಳ (ಉತ್ತರ ಕನ್ನಡ):ಕೊರೊನಾ ವೈರಸ್‍ನಿಂದ 2 ತಿಂಗಳ ಲಾಕ್​ಡೌನ್​​ ಹಿನ್ನೆಲೆ ರಾಜ್ಯ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಬಳಿಕ ಭಟ್ಕಳದಲ್ಲಿ ಪ್ರಯೋಗಿಕವಾಗಿ ಬಸ್​ ಸಂಚಾರ ಆರಂಭವಾಗಿತ್ತು. ಆದರೆ ಎರಡು ದಿನವೂ ಪ್ರಯಾಣಿಕರಿಲ್ಲದೆ ಬಸ್ ಖಾಲಿ ಖಾಲಿ ಎನ್ನುವಂತಾಗಿದೆ.

ಭಟ್ಕಳದಲ್ಲಿ ಮುಂದುವರೆದ ಕೊರೊನಾತಂಕ: ಪ್ರಯಾಣಿಕರಿಲ್ಲದೆ ಖಾಲಿ ನಿಂತ ಬಸ್​​ಗಳು

ಭಟ್ಕಳ ಕಂಟೇನ್ಮೆಂಟ್​ ವಲಯದಲ್ಲಿದ್ದ ಹಿನ್ನೆಲೆ ಇಲ್ಲಿಂದ ಬಸ್​ಗಳು ಬೇರೆ ತಾಲೂಕು, ಜಿಲ್ಲೆಗೆ ಸಂಚಾರ ನಿಷೇಧಿಸಲಾಗಿತ್ತು. ಆದರೆ ಬೇರೆ ಡಿಪೋದಿಂದ ಬಸ್​ಗಳು ಭಟ್ಕಳ ಮಾರ್ಗವಾಗಿ ತೆರಳುತ್ತಿದ್ದರೂ ಭಟ್ಕಳದಲ್ಲಿ ನಿಲ್ಲದೆ ಹಾಗೇ ತೆರಳುತ್ತಿವೆ.

ಇಂದಿನಿಂದ ಭಟ್ಕಳದಿಂದ ಬೆಂಗಳೂರಿಗೆ, ಹುಬ್ಬಳ್ಳಿ, ಕೊಲ್ಲಾಪುರಕ್ಕೆ ಬಸ್‍ ಸಂಚಾರ ಆರಂಭವಾದರೂ ಪ್ರಯಾಣಿಕರಿಲ್ಲದೆ ಬಸ್​ಗಳು ಖಾಲಿಯಾಗಿವೆ. ಈ ಹಿನ್ನೆಲೆ ಬಸ್​ಗಳನ್ನು ಡಿಪೋಗಳಿಗೆ ವಾಪಸ್​​ ಕಳುಹಿಸಲಾಗುತ್ತಿದೆ. ಹುಬ್ಬಳ್ಳಿ ಸೇರಿ ವಿವಿಧ ಕಡೆ ತೆರಳಿದ ಬಸ್‍ಗಳು ನಿಗದಿತ ಊರಿಗೆ ಹೋಗದೆ ಅರ್ಧದಲ್ಲಿಯೇ ವಾಪಸ್​​ ಬಂದಿದ್ದವು.

ಎಲ್ಲದಕ್ಕೂ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿದ್ದು, ಜನರು ಇನ್ನೂ ಸಹ ಲಾಕ್​ಡೌನ್​ ಸಡಿಲಿಕೆಯಾಗಿದ್ದರೂ ಕೊರೊನಾ ಭಯದಲ್ಲಿದ್ದಾರೆ. ಮಂಗಳವಾರ ಭಟ್ಕಳದಿಂದ ಶಿರಸಿ, ಹುಬ್ಬಳ್ಳಿ, ಕಾರವಾರ ಶಿವಮೊಗ್ಗ ಬೆಂಗಳೂರಿಗೆ ಬಸ್ ಬಿಡಲಾಗಿದ್ದು, ಒಟ್ಟು 13 ಬಸ್ ತೆರಳಿದ್ದವು. ಬುಧವಾರ 8 ಬಸ್ ಬಿಡಲಾಗಿದ್ದರೂ 3 ಬಸ್​ಗಳು ವಾಪಸ್​ ಬಂದಿವೆ. ಈ ಪೈಕಿ ಭಟ್ಕಳ, ಹೊನ್ನಾವರ, ಕುಂದಾಪುರಕ್ಕೆ ತೆರಳಿದ ಬಸ್​​ಗಳು ಸಹ ಇದ್ದವು. ಭಟ್ಕಳ ಪಕ್ಕದ ಉಡುಪಿ ಜಿಲ್ಲೆಯಲ್ಲಿ ಸದ್ಯ ಕೊರೊನಾ ಪ್ರಕರಣ ಭಾರಿ ಏರಿಕೆ ಕಂಡು ಬಂದ ಹಿನ್ನೆಲೆ ಕುಂದಾಪುರಕ್ಕೆ ತೆರಳುವ ಪ್ರಯಾಣಿಕರು ಇಲ್ಲದಂತಾಗಿದೆ.

ABOUT THE AUTHOR

...view details