ಕರ್ನಾಟಕ

karnataka

ETV Bharat / state

ಭಟ್ಕಳ ಬಿಜೆಪಿ ಯುವ ಮೋರ್ಚಾ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ - pays tribute to martyrdom

ಭಟ್ಕಳದ ತಾಲೂಕು ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು 2 ನಿಮಿಷ ಮೌನಾಚರಣೆ ಹಾಗೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು.

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

By

Published : Jun 23, 2020, 5:49 PM IST

ಭಟ್ಕಳ: ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಸರಕೇರಿ ನಿಚ್ಚಲಮಕ್ಕಿ ತಿರುಮಲ ಸಭಾಭವನದಲ್ಲಿ ನಡೆಸಲಾಯಿತು.

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಬಿಜೆಪಿ ಘಟಕದ ಪ್ರಮುಖ ಕೃಷ್ಣ ನಾಯ್ಕ ಆಸರಕೇರಿ, ದೇಶದಲ್ಲಿ ಆರ್​ಎಸ್​ಎಸ್​ನಲ್ಲಿದ್ದವರೇ ಹೆಚ್ಚಿನವರು ಬಿಜೆಪಿಯಲ್ಲಿದ್ದಾರೆ. ಈಗಾಗಲೇ ಆರ್​ಎಸ್ಎಸ್ ಸೈನಿಕರ ಕೊರತೆಯಿದ್ದಲ್ಲಿ ಲಕ್ಷಕ್ಕೂ ಅಧಿಕ ಸಂಘಟಕರನ್ನು ಕಳುಹಿಸಲಿದ್ದೇವೆ ಎಂದಿದ್ದಾರೆ‌. ಸಂಬಂಧದ ಬೆಲೆ ಗೊತ್ತಿರದ ಚೀನಾ ವಿರುದ್ಧ ಯುದ್ಧ ಸುಲಭವಲ್ಲ. ಪಾಕಿಸ್ತಾನವನ್ನು ಸರಾಗವಾಗಿ ಗೆಲ್ಲಬಹುದು. ಇವೆಲ್ಲವೂ ಬಲವಾಗಬೇಕಾದರೆ ನಮ್ಮಲ್ಲಿನ ಯುವಮೋರ್ಚಾ ಸಂಖ್ಯೆ ಹೆಚ್ಚಾಗಬೇಕು‌. ಚೀನಾದವರಿಗೆ ತಮ್ಮ ಅಪ್ಪ-ಅಮ್ಮ ಯಾರು ಅನ್ನೋದೇ ಗೊತ್ತಿಲ್ಲ. ಅವರಿಗೆ ರಾಷ್ಟ್ರ ಒಂದೇ ಮುಖ್ಯ. ಅವರಿಗೆ ಮನೆ, ಸಂಸಾರ, ಸಂಬಂಧದ ಕರುಣೆ ಇಲ್ಲ ಎಂದರು.

ನಾವು ಚೀನಾವನ್ನು ಆರ್ಥಿಕವಾಗಿ, ಜಾಗತಿಕವಾಗಿ ಸೋಲಿಸಬೇಕು. ಭಾರತವೂ ಚೀನಾ ವಸ್ತುಗಳನ್ನು ನಿಷೇಧ ಮಾಡಿದರೆ ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲಲು ಸಾದ್ಯವಿಲ್ಲ. ಸೈನಿಕರ ತಂಡದಂತೆ ನಮ್ಮ ಊರಿನಲ್ಲಿ ಯುವಮೋರ್ಚಾ ಬಲ ಹೆಚ್ಚಾಗಬೇಕು. ಯುವ ಮೋರ್ಚಾ ವಿಸ್ತರಣೆ ಭಟ್ಕಳದಲ್ಲಿ ಅಗತ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು 2 ನಿಮಿಷ ಮೌನಾಚರಣೆ ಹಾಗೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು.

ABOUT THE AUTHOR

...view details