ಕರ್ನಾಟಕ

karnataka

ETV Bharat / state

ಆಯುರ್ವೇದ ಗಿಡಮೂಲಿಕೆ ಮಾಸ್ಕ್​ ತಯಾರಿಸಿದ ಬೆಂಗ್ರೆ ಉಸಿರಾ ಇಂಡಸ್ಟ್ರೀಸ್: ಏನಿದರ ವಿಶೇಷತೆ? - ಭಟ್ಕಳ

ಭಟ್ಕಳದ ಬೆಂಗ್ರೆ ಉಸಿರಾ ಕೈಗಾರಿಕಾ ಘಟಕದಲ್ಲಿ ಸುಗಂಧ ಭರಿತ ಆಯುರ್ವೇದ ಗಿಡಮೂಲಿಕೆಯ ಲಾವಂಚ ಬೇರಿನ ಮುಖಗವಸುಗಳನ್ನು ತಯಾರಿಸಲಾಗುತ್ತಿದೆ. ಆಯುರ್ವೇದ ಗುಣಗಳನ್ನು ಹೊಂದಿರುವ ಲಾವಂಚದ ಬೇರಿನಿಂದ ಸಿದ್ಧಪಡಿಸಿದ ಈ ಮುಖಗವಸು ಧರಿಸುವುದರಿಂದ ಅತೀ ಸೂಕ್ಷ್ಮ ರೋಗಾಣುಗಳನ್ನು ತಡೆಗಟ್ಟಬಹುದು ಹಾಗೂ ಅತೀ ದೀರ್ಘಕಾಲದವರೆಗೂ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.

Ayurvedic herbal mask
ಆಯುರ್ವೇದ ಗಿಡಮೂಲಿಕೆ ಮಾಸ್ಕ್​ ತಯಾರಿಸಿದ ಭಟ್ಕಳದ ಬೆಂಗ್ರೆ ಉಸಿರಾ ಇಂಡಸ್ಟ್ರೀಸ್

By

Published : Jun 2, 2020, 6:33 PM IST

ಭಟ್ಕಳ:ಸುಗಂಧಭರಿತ ಆಯುರ್ವೇದ ಗಿಡಮೂಲಿಕೆಯ ಲಾವಂಚ ಬೇರಿನ ಮುಖಗವಸು(ಮಾಸ್ಕ್​​)ಗಳನ್ನು ತಯಾರಿಸುವಲ್ಲಿ ತಾಲೂಕಿನ ಬಂಗಾರ ಮಕ್ಕಿಯಲ್ಲಿರುವ ಬೆಂಗ್ರೆ ಉಸಿರಾ ಇಂಡಸ್ಟ್ರೀಸ್ ಯಶಸ್ವಿಯಾಗಿದೆ.

ಕಳೆದ 22 ವರ್ಷಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸಿಕೊಂಡು ಬರುತ್ತಿದ್ದು, ಈ ಸಮಯಕ್ಕೆ ತಕ್ಕಂತೆ ಮುಖ ಮತ್ತು ಬಾಯಿ ಮುಚ್ಚುವಂತಹ ಗವಸುಗಳನ್ನು ತಯಾರಿಸುವಲ್ಲಿ ಇವರು ಮುಂದಾಗಿದ್ದಾರೆ. ಕೊರೊನಾ ವೈರಸ್​ನಿಂದಾಗಿ ಸಾವಿನ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಭೀತಿಯಿ೦ದ ಇದೀಗ ನೈಸರ್ಗಿಕವಾಗಿ ಸಿಗುವ ಲಾವಂಚದ ಬೇರುಗಳನ್ನು ಸಂಸ್ಕರಿಸಿ ಮುಖಗವಸು ತಯಾರಿ ತಾಲೂಕಿನ ಜನರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಲಾವಂಚ ಬೇರಿನ ಮುಖಗವಸುಗಳು

ಆಯುರ್ವೇದ ಗುಣಗಳನ್ನು ಹೊಂದಿರುವ ಲಾವಂಚದ ಬೇರಿನಿಂದ ಸಿದ್ಧಪಡಿಸಿದ ಈ ಮುಖಗವಸು ಧರಿಸುವುದರಿಂದ ಅತೀ ಸೂಕ್ಷ್ಮ ರೋಗಾಣುಗಳನ್ನು ತಡೆಗಟ್ಟಬಹುದು ಹಾಗೂ ಅತಿ ದೀರ್ಘ ಕಾಲದವರೆಗೂ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.

ಆಯುರ್ವೇದ ಗಿಡಮೂಲಿಕೆ ಮಾಸ್ಕ್​ ತಯಾರಿಸಿದ ಭಟ್ಕಳದ ಬೆಂಗ್ರೆ ಉಸಿರಾ ಇಂಡಸ್ಟ್ರೀಸ್

ಉಸಿರಾ ಇಂಡಸ್ಟ್ರೀಸ್ ಮಾಲೀಕರಾದ ಎಂ. ಮ್ಯಾಥ್ಯೂ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ ನಾವು ಸತತ 22 ವರ್ಷಗಳಿಂದ ಕರಕುಶಲ ವಿನ್ಯಾಸಗಳನ್ನು ತಯಾರಿಸಿ ಬಳಕೆಗೆ ನೀಡುತ್ತಾ ಬಂದಿರುತ್ತೇವೆ. ಕೊರೊನಾ ಸಂದರ್ಭದಲ್ಲಿ ಮಾಸ್ಕ್​ನ ಬಳಕೆ ಅವಶ್ಯಕವಾದದ್ದನ್ನು ಮನಗಂಡು ನಾವು ಲಾವಂಚದ ಬೇರುಗಳನ್ನು ಉಪಯೋಗಿಸಿ ಮಾಸ್ಕ ತಯಾರಿಸಿದ್ದೇವೆ. ಅದರ ಉಪಯೋಗ ಪಡೆಯಲು ಹತ್ತಿರದ ಜನರಿಗೆ ಕೊಟ್ಟಿದ್ದೇವೆ. ಉಪಯೋಗಿಸದವರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಇದನ್ನು ಆರು ತಿಂಗಳಿಂದ ಒಂದು ವರ್ಷದವರೆಗೂ ಬಳಕೆ ಮಾಡಬಹುದಾಗಿದೆ. ಕಡಿಮೆ ಮೊತ್ತದ ಮಾಸ್ಕ್​ಗಳು ಲಭ್ಯವಿದ್ದು, 100 ರಿಂದ 150 ರೂಪಾಯಿ ಬೆಲೆಗೆ ಡಬಲ್ ಲೇಯರ್​ ಮಾಸ್ಕ್​ಗೆ ದರ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ಮಾಸ್ಕ್​ ಬಳಸಿ ಸ್ವಚ್ಛ ಮಾಡುವ ವಿಧಾನ ಹೀಗಿದೆ:

  • ಮಾಸ್ಕ್​ ಬಳಕೆಯ ನಂತರ ಸಾಬೂನು ಮತ್ತು ಬಿಸಿ ನೀರಿನಲ್ಲಿ ತೊಳೆಯಬೇಕು.
  • ಸೂರ್ಯನ ಬೆಳಕಿನಲ್ಲಿ ಕನಿಷ್ಠ 2 ಗಂಟೆ ಒಣಗಿಸಬೇಕು.
  • ಸೂರ್ಯನ ಬೆಳಕು ಇಲ್ಲ ಎಂದಾದಲ್ಲಿ, ಕುಕ್ಕರ್‌ನಲ್ಲಿ ನೀರಿನೊಂದಿಗೆ ಹಾಕಿ ಹತ್ತು ನಿಮಿಷ ಕುದಿಸಿ, ಬೆಚ್ಚಗಿನ ಗಾಳಿಯ ಸಂಪರ್ಕಕ್ಕೆ ಇಡಬೇಕಾಗುತ್ತದೆ ಎಂದು ಉಸಿರಾ ಇಂಡಸ್ಟ್ರೀಸ್ ಮಾಲೀಕರಾದ ಎಂ. ಮ್ಯಾಥ್ಯೂ ಬಳಕೆಯ ವಿವರಣೆ ನೀಡಿದ್ದಾರೆ.

ABOUT THE AUTHOR

...view details