ಕರ್ನಾಟಕ

karnataka

ETV Bharat / state

ಬೆಂಗ್ರೆ, ಮಾವಿನಕಟ್ಟೆಯಲ್ಲಿ ಪಾಸಿಂಗ್​​​ ನಿರ್ಮಾಣಕ್ಕೆ ಆಗ್ರಹ - ಡಿವೈಡರ್ ಮಧ್ಯೆ ಪಾಸಿಂಗ್ ನಿರ್ಮಾಣ

ಬೆಂಗ್ರೆ, ಮಾವಿನಕಟ್ಟೆ ಹೃದಯ ಭಾಗಕ್ಕೆ ಬರಲು ಅನುಕೂಲವಾದ ಯಾವ ರಸ್ತೆಯೂ ಇಲ್ಲ. ಹಾಗಾಗಿ ಡಿವೈಡರ್ ಮಧ್ಯೆ ಪಾಸಿಂಗ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಅಲ್ಲಿನ ಬೆಂಗ್ರೆ, ಮಾವಿನಕಟ್ಟೆ, ಕೋಗ್ತಿ ಗ್ರಾಮಸ್ಥರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಸಹಾಯಕ ಆಯುಕ್ತರಿಗೆ ಗ್ರಾಮಸ್ಥರಿಂದ ಮನವಿ

By

Published : Nov 11, 2019, 6:03 PM IST

ಭಟ್ಕಳ: ತಾಲೂಕಿನ ಬೆಂಗ್ರೆ ಪಂಚಾಯಿತಿ ವ್ಯಾಪ್ತಿಯ ಮಾವಿನಕಟ್ಟೆ ಕೋಗ್ತಿಯಲ್ಲಿ ಡಿವೈಡರ್ ಮಧ್ಯೆ ಪಾಸಿಂಗ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಅಲ್ಲಿನ ಬೆಂಗ್ರೆ, ಮಾವಿನಕಟ್ಟೆ, ಕೋಗ್ತಿ ಗ್ರಾಮಸ್ಥರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಬೆಂಗ್ರೆ, ಮಾವಿನಕಟ್ಟೆ ಹೃದಯ ಭಾಗಕ್ಕೆ ಬರಲು ಅನುಕೂಲವಾದ ಯಾವ ರಸ್ತೆಯೂ ಇಲ್ಲ. ಈ ಭಾಗದಲ್ಲಿ ಕ್ರಾಸಿಂಗ್ ರಸ್ತೆ ಇಲ್ಲದೇ ಇರುವುದರಿಂದ ರೈತರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

ಸಹಾಯಕ ಆಯುಕ್ತರಿಗೆ ಗ್ರಾಮಸ್ಥರಿಂದ ಮನವಿ

ಈ ಎರಡು ಭಾಗದಲ್ಲಿ ಸುಮಾರು 4,000ರಿಂದ 8,000 ಜನರು ವಾಸಿಸುತ್ತಿದ್ದು, ದಿನ ಕೆಲಕ್ಕೆ ಹೋಗಬೇಕಾದರೆ 3ರಿಂದ 4 ಕಿ.ಮೀ. ವ್ಯಾಪ್ತಿಯಲ್ಲಿ ನಡೆದು ಹೋಗಿ ಪುನಃ ಬರಬೇಕಾದ ಪರಿಸ್ಥಿತಿ ಇದೆ. ಬೆಂಗ್ರೆ ಮಾರುಕಟ್ಟೆಯಲ್ಲಿ ಅನಾದಿ ಕಾಲದಿಂದಲೂ ಇರುವ ಪಾಸಿಂಗ್ ಸರ್ಕಲ್ ಬಂದ್ ಮಾಡಿರುವುದರಿಂದ ಈ ಭಾಗದ ಜನರು ತೊಂದರೆ ಅನುಭವಿಸುವಂತಾಗಿದೆ. ಈ ಭಾಗದಲ್ಲಿ ಪಾಸಿಂಗ್ ನಿರ್ಮಾಣ ಮಾಡಿ, ಜನರಿಗೆ ಅನುಕೂಲ ಮಾಡಬೇಕಾಗಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.

ABOUT THE AUTHOR

...view details