ಭಟ್ಕಳ: ತಾಲೂಕಿನ ಬೆಣಂದೂರು ಗ್ರಾಮದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಭಟ್ಕಳದಲ್ಲಿ ವ್ಯಕ್ತಿಯ ಹತ್ಯೆ: 13 ಜನರ ವಿರುದ್ಧ ಪ್ರಕರಣ ದಾಖಲು - ಬೆಣಂದೂರು ಕೊಲೆ ಪ್ರಕರಣ
ಬೆಣಂದೂರು ಗ್ರಾಮದಲ್ಲಿ ವ್ಯಕ್ತಿಯೋರ್ವನನ್ನು ಹಳೇ ದ್ವೇಷದಿಂದ ದುಷ್ಕರ್ಮಿಗಳ ಗುಂಪು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ 13 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ
ಬೆಣಂದೂರು ಗ್ರಾಮದ ಜಯಂತ ನಾಯ್ಕ, ಮಂಜುನಾಥ ನಾಯ್ಕ, ದೇವೇಂದ್ರ ನಾಯ್ಕ, ಸುಬ್ರಮಣ್ಯ ನಾಯ್ಕ, ಬಲೀಂದ್ರ ನಾಯ್ಕ, ಈಶ್ವರ ನಾಯ್ಕ, ಗಣಪತಿ ನಾಯ್ಕ, ಕೃಷ್ಣ ನಾಯ್ಕ, ಸಂತೋಷ ನಾಯ್ಕ, ಮಹೇಶ ನಾಯ್ಕ, ಸುರೇಶ ನಾಯ್ಕ, ಸುನೀಲ ನಾಯ್ಕ ಮತ್ತು ಮಾದೇವ ನಾಯ್ಕ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಕುರಿತು ಮೃತನ ಸಹೋದರ ಪರಮೇಶ್ವರ ನಾಯ್ಕ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.