ಭಟ್ಕಳ : ಒಬ್ಬ ಕೋವಿಡ್ ಸೋಂಕಿತನಿಗೆ ಸರ್ಕಾರದಿಂದ ಯಾವುದೇ ನಿಗದಿತ ಹಣ ಬಿಡುಗಡೆಯಾಗುವ ವ್ಯವಸ್ಥೆ ಇಲ್ಲ ಎಂದು ಸಹಾಯಕ ಆಯುಕ್ತ ಭರತ್ ಎಸ್ ಸ್ಪಷ್ಟಪಡಿಸಿದರು.
ಕೋವಿಡ್ ಸೋಂಕಿತನಿಗೆ ಸರ್ಕಾರದಿಂದ ಯಾವುದೇ ಹಣ ಬಿಡುಗಡೆಯಾಗದು: ಎಸ್.ಭರತ್ - Government Guidelines
ಸರ್ಕಾರದಿಂದ ಕೊರೊನಾ ಸೋಂಕಿತನಿಗೆ ಹಣ ಬಿಡುಗಡೆ ಆಗುತ್ತದೆ, ಅದರಂತೆ ಗಂಟಲು ದ್ರವ ಪರೀಕ್ಷೆ ಮಾಡಿಸುತ್ತಾರೆ ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಸಹಾಯಕ ಆಯುಕ್ತ ಎಸ್.ಭರತ್ ಉತ್ತರಿಸಿದರು.
ಕೊರೊನಾ ಬಗೆಗಿನ ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದಿಂದ ಕೋವಿಡ್ ಸೋಂಕಿತನಿಗೆ ನಿಗದಿತ ಹಣ ಬಿಡುಗಡೆ ಆಗಿದೆ. ಅದರಂತೆ ಗಂಟಲು ದ್ರವ ಪರೀಕ್ಷೆ ಮಾಡಿಸಿ ಪಾಸಿಟಿವ್ ಪ್ರಮಾಣ ತೋರಿಸಲಾಗುತ್ತದೆ ಎಂಬುದು ಸುಳ್ಳು.
ಪಾಸಿಟಿವ್ ಪ್ರಕರಣ ಜಾಸ್ತಿ ಆಗಿದ್ದಲ್ಲಿ ಜಿಲ್ಲಾಡಳಿತ ನಮಗೆ ಏಕೆ ಪ್ರಕರಣ ಏರಿಕೆ ಆಗಿದೆ? ಮತ್ತು ನಿಯಂತ್ರಣ ಏಕೆ ಅಸಾಧ್ಯ ಎಂಬ ಬಗ್ಗೆ ಪ್ರಶ್ನಿಸಿ ಎಚ್ಚರಿಸಲಿದೆ. ಪಾಸಿಟಿವ್ ಬಂದವರ ಆರೈಕೆ ಮಾಡಿ ಚಿಕಿತ್ಸೆ ನೀಡುವಷ್ಟು ಸರ್ಕಾರದಲ್ಲಿ ಹಣವಿದೆ. ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸಕ ಪರಿಕರಗಳಾದ ಐಸಿಯು, ವೆಂಟಿಲೇಟರ್ ಸಹಿತ ಎಲ್ಲ ವ್ಯವಸ್ಥೆ ಇದೆ ಎಂದು ತಿಳಿಸಿದರು. ಇದೇ ವೇಳೆ ಪತ್ರಕರ್ತರ ಹತ್ತು ಹಲವು ಪ್ರಶ್ನೆಗಳಿಗೆ ಎಸ್.ಭರತ್ ಉತ್ತರಿಸಿದರು.