ಶಿರಸಿ: ರಾಜ್ಯ ಸರ್ಕಾರದ ಸೂಚನೆಯಂತೆ ಶಿರಸಿಯಲ್ಲಿ ಹೊಸ ವರ್ಷದಿಂದ ದ್ವಿತೀಯ ಪಿಯುಸಿ, ಎಸ್ಎಸ್ಎಲ್ಸಿ ತರಗತಿಗಳು ಆರಂಭಗೊಂಡಿದ್ದು, ಸರ್ಕಾರದ ವಿದ್ಯಾಗಮ–2 ಗೂ ಸಹ ಚಾಲನೆ ನೀಡಲಾಗಿದೆ.
ಒಂಬತ್ತು ತಿಂಗಳ ಬಳಿಕ ಶಾಲೆಗೆ ಬರಲು ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿದ್ದು, ತರಗತಿ ಪ್ರವೇಶಿಸುವ ಮುನ್ನ ವಿದ್ಯಾರ್ಥಿಗಳ ದೈಹಿಕ ಉಷ್ಣಾಂಶ ಪರೀಕ್ಷಿಸಿ ಒಳಗೆ ಬಿಡಲಾಯಿತು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೊಠಡಿಯಲ್ಲಿ ಕೂರಿಸಿ ಪಾಠ ಮಾಡಲಾಯಿತು.
ಶೇ.63ರಷ್ಟು ಹಾಜರಾತಿ:ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪ್ರಾರಂಭೋತ್ಸವಕ್ಕೆ ಸ್ಪಂದನೆ ಸಿಕ್ಕಿದೆ. ಮೊದಲ ದಿನವೇ ಶೇ.63.90ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. 10,677 ವಿದ್ಯಾರ್ಥಿಗಳ ಪೈಕಿ 6823 ತರಗತಿಗಳಿಗೆ ಬಂದಿದ್ದರು. 6 ರಿಂದ 9ನೇ ತರಗತಿಯ ವಿದ್ಯಾಗಮ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಶೇ.41.06ರಷ್ಟಿತ್ತು. 46,734 ವಿದ್ಯಾರ್ಥಿಗಳಲ್ಲಿ 19,188 ವಿದ್ಯಾರ್ಥಿಗಳು ಹಾಜರಾಗಿದ್ದರು.