ಕರ್ನಾಟಕ

karnataka

ETV Bharat / state

ಶಿರಸಿ: ಗೋಮಾಂಸ ಸಾಗಾಟ, ಐವರ ಬಂಧನ - Sirasi news

ದನದ ಮಾಂಸ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Shirasi
Shirasi

By

Published : Aug 21, 2020, 10:10 PM IST

ಶಿರಸಿ:ದನದ ಮಾಂಸ, ಚರ್ಮ ಹಾಗೂ ಕಾಲುಗಳನ್ನು ಕಾರೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ ಮಾಂಸ ವಶಪಡಿಸಿಕೊಂಡ ಘಟನೆ ಇಲ್ಲಿನ ಹುಬ್ಬಳ್ಳಿ ರಸ್ತೆಯ ನರೇಬೈಲ್ ಕ್ರಾಸ್ ಬಳಿ ನಡೆದಿದೆ.

ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ಸಲೀಂಬಾಷಾ ಅಬ್ದುಲ ಖಾದರ‌ ಸಾಬ ಬಹದ್ದೂರ, ಜಾವೇದ ಬಾಷಾಸಾಬ ಬೇಪಾರಿ, ಖಾಜಾಮುದ್ದಿನ ಅಲ್ಲಾಬಕ್ಷ ಬೇಪಾರಿ , ಸಲೀಂ ಮಾಮುಸಾಬ ಬೇಪಾರಿ ಹಾಗೂ ಶಿರಸಿ ಮುಸ್ಲಿಂ ಗಲ್ಲಿಯ ಖಲೀಮುಲ್ಲಾ ಅಬ್ದುಲಖರೀಮ ಶೇಖ ಬಂಧಿತ ಆರೋಪಿಗಳಾಗಿದ್ದಾರೆ.

ಇವರಿಂದ 44500/- ರೂ ಮೌಲ್ಯದ ದನದ ಮಾಂಸವನ್ನು ಹಾಗೂ 2,00,000/- ರೂ ಮೌಲ್ಯದ ನೀಲಿ ಬಣ್ಣದ ಮಾರುತಿ ಓಮಿನಿ ( ಕೆಎ-04 ಎಮ್.ಡಿ-5924 ) ವಶಪಡಿಸಿಕೊಳ್ಳಲಾಗಿದೆ.

ಹಾನಗಲ್ ತಾಲೂಕ ಅಕ್ಕಿಆಲೂರ ಕಡೆಯಿಂದ ಶಿರಸಿ ಮಾರ್ಗವಾಗಿ ಸೊರಬ ಮತ್ತು ಶಿವಮೊಗ್ಗದ ಕಡೆಗೆ ಒಟ್ಟು 85 ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details