ಶಿರಸಿ :ದನ ಮೇಯಿಸಲು ತೆರಳಿದ್ದ ವ್ಯಕ್ತಿಯ ಮೇಲೆ ಕರಡಿಗಳು ದಾಳಿ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯೀಡಾ ತಾಲೂಕಿನ ಬಜಾರಕುಣಂಗ ಗ್ರಾಪಂ ವ್ಯಾಪ್ತಿಯ ಕರಂಜೆಯಲ್ಲಿ ನಡೆದಿದೆ.
ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ದಾಳಿ ನಡೆಸಿದ ಕರಡಿಗಳು.. - ಬಜಾರಕುಣಂಗ ಗ್ರಾಮ
ಪ್ರತಿದಿನದಂತೆ ರಸ್ತೆಯ ಪಕ್ಕದಲ್ಲಿಯೇ ದನ ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಕರಡಿಗಳು ದಾಳಿ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯೀಡಾ ತಾಲೂಕಿನ ಬಜಾರಕುಣಂಗ ಗ್ರಾಮದಲ್ಲಿ ನಡೆದಿದೆ.
Bear attack, ಕರಡಿ ದಾಳಿ
ಜೊಯೀಡಾದ ಶಿವಾಜಿ ಗಾಯಗೊಂಡ ವ್ಯಕ್ತಿ. ಈತ ಪ್ರತಿ ದಿನದಂತೆ ರಸ್ತೆಯ ಪಕ್ಕದಲ್ಲಿಯೇ ದನ ಮೇಯಿಸುವ ಸಂದರ್ಭದಲ್ಲಿ ಏಕಾಏಕಿ ಎರಡು ಕರಡಿಗಳು ದಾಳಿ ನಡೆಸಿವೆ. ಈತನ ಚೀರಾಟ ಕೇಳಿ ಗ್ರಾಮಸ್ಥರು ಬಂದು ಶಿವಾಜಿಯನ್ನು ರಕ್ಷಿಸಿದ್ದಾರೆ. ಇನ್ನು, ಕರಡಿ ದಾಳಿಯಿಂದ ಗಾಯಗಳಾಗಿದ್ದ ಇವರನ್ನು ತಕ್ಷಣ ರಾಮನಗರದ ಸರ್ಕಾರಿ ಆಸ್ಪತ್ರೆಗೆ ಕರೆದ್ಯೊಯಲಾಗಿತ್ತು. ಬಳಿಕ ನಂತರ ಹೆಚ್ಚಿನ ಚಿಕಿತ್ಸೆಗೆಗಾಗಿ ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ.