ಕರ್ನಾಟಕ

karnataka

ETV Bharat / state

ಎರಡು ಕರಡಿ ದಾಳಿ... ಎದೆಗುಂದದೆ ಮರವೇರಿ ಬಚಾವಾದ ರೈತ! - ರೈತನ ಮೇಲೆ ಕರಡಿ ದಾಳಿ

ಹೇಗೊ ಕರಡಿಗಳಿಂದ ತಪ್ಪಿಸಿಕೊಂಡು ಮರವನ್ನೇರಿ ಕುಳಿತ ನಿರಂಜನ್​, ತನ್ನ ಸ್ಥಿತಿಯ‌ ಬಗ್ಗೆ ವಿಡಿಯೋ ಮಾಡಿ ಮೊಬೈಲ್‌ ಮೂಲಕ ಗ್ರಾಮಸ್ಥರಿಗೆ ಕರಡಿ ದಾಳಿಯ ಬಗ್ಗೆ ತಿಳಿಸಿದ್ದಾನೆ. ಬಳಿಕ 25ಕ್ಕೂ ಹೆಚ್ಚು ಗ್ರಾಮಸ್ಥರು ಅರಣ್ಯಕ್ಕೆ ಧಾವಿಸಿ ಗಾಯಾಳುವನ್ನು ಹುಡುಕಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ.

bear-attack-on-young-man-farmer-saved-himself
ಬಚಾವಾದ ರೈತ

By

Published : Oct 3, 2020, 6:12 PM IST

ಕಾರವಾರ:ಕಾಣೆಯಾಗಿದ್ದ ಎತ್ತುಗಳನ್ನು ಹುಡಕಲು ಹೋದವನ ಮೇಲೆ ಎರಡು ಕರಡಿಗಳು ದಾಳಿ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ, ಮುಂಡಗೋಡ ತಾಲ್ಲೂಕಿನ ನ್ಯಾಸರ್ಗಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ನ್ಯಾಸರ್ಗಿ ಗ್ರಾಮದ ನಿರಂಜನ್ (35) ಗಾಯಗೊಂಡ ವ್ಯಕ್ತಿ. ನ್ಯಾಸರ್ಗಿ ಅರಣ್ಯದಲ್ಲಿ ಕಳೆದುಹೋಗಿದ್ದ ತನ್ನ ಎತ್ತುಗಳಿಗಾಗಿ ಹುಡುಕಾಟ ನಡೆಸಿದ್ದ ನಿರಂಜನ್, ಎತ್ತುಗಳು ಸಿಕ್ಕ ಬಳಿಕ ಅವುಗಳನ್ನು ಹೊಡೆದುಕೊಂಡು ವಾಪಾಸ್​ ಮರಳುತ್ತಿದ್ದ. ಹಾದಿ ಮಧ್ಯೆ ಕಾಡು ಹಾಗಲಕಾಯಿ ಕಂಡಿದ್ದು, ಅವನ್ನು ತರಲು ಹೋದಾಗ ಎರಡು ಕರಡಿಗಳು ದಾಳಿ ಮಾಡಿವೆ. ತಲೆ, ಕೈ, ಕಾಲು ಸೇರಿದಂತೆ ವಿವಿಧೆಡೆ ಕಚ್ಚಿ ಗಾಸಿಗೊಳಿಸಿವೆ.

ಕರಡಿ ದಾಳಿಯಿಂದ ಬಚಾವಾದ ರೈತ

ಹೇಗೊ ಕರಡಿಗಳಿಂದ ತಪ್ಪಿಸಿಕೊಂಡು ಮರವನ್ನೇರಿ ಕುಳಿತ ನಿರಂಜನ್​, ತನ್ನ ಸ್ಥಿತಿಯ‌ ಬಗ್ಗೆ ವಿಡಿಯೋ ಮಾಡಿ ಮೊಬೈಲ್‌ ಮೂಲಕ ಗ್ರಾಮಸ್ಥರಿಗೆ ಕರಡಿ ದಾಳಿಯ ಬಗ್ಗೆ ತಿಳಿಸಿದ್ದಾನೆ. ಬಳಿಕ 25ಕ್ಕೂ ಹೆಚ್ಚು ಗ್ರಾಮಸ್ಥರು ಅರಣ್ಯಕ್ಕೆ ಧಾವಿಸಿ ಗಾಯಾಳುವನ್ನು ಹುಡುಕಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ನಿರಂಜನ್​ಗೆ ಮುಂಡಗೋಡು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ವಲಯ ಅರಣ್ಯಾಧಿಕಾರಿ ಸುರೇಶ ಕುಲ್ಲೋಳ್ಳಿ ಆಸ್ಪತ್ರೆಗೆ ತೆರಳಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ.

ABOUT THE AUTHOR

...view details