ಕರ್ನಾಟಕ

karnataka

ರೈತನ ಮೇಲೆ ಕರಡಿ ದಾಳಿ.. ಅರಣ್ಯ ಇಲಾಖೆ ಸಹಾಯ ಕೇಳಿದ ಬಡ ಕುಂಟುಂಬ..

ಕರಡಿಯೊಂದು ದಾಳಿ ನಡೆಸಿ ರೈತನ ಕಾಲನ್ನು ಕಚ್ಚಿ ಹರಿದ ಘಟನೆ ಜೋಯಿಡಾ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಂಬಾರವಾಡಾ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ನಡೆದಿದೆ.

By

Published : Dec 16, 2019, 4:55 PM IST

Published : Dec 16, 2019, 4:55 PM IST

Bear attack
Bear attack

ಶಿರಸಿ: ಕರಡಿಯೊಂದು ದಾಳಿ ನಡೆಸಿ ರೈತನ ಕಾಲನ್ನು ಕಚ್ಚಿ ಹರಿದ ಘಟನೆ ಜೋಯಿಡಾ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಂಬಾರವಾಡಾ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ನಡೆದಿದೆ.

ಜೋಯಿಡಾದ ನುಜ್ಜಿ ಸಮೀಪದ ನವರ ಗ್ರಾಮದ ವಿಠಲ ಭಾಮಟೋ ವೇಳಿಪ ಎಂಬ ರೈತ ಕರಡಿ ದಾಳಿಗೆ ತುತ್ತಾಗಿದ್ದಾನೆ. ಇವರು ಗುಂಡಾಳಿ ಹತ್ತಿರದ ತಮ್ಮ ಹೊಲದಲ್ಲಿ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕರಡಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಈತನ ಮೊಣಕಾಲಿನ ಕೆಳಭಾಗವನ್ನು ಕರಡಿ ಕಚ್ಚಿ ಹರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರೈತನಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅರಣ್ಯ ಇಲಾಖೆ ಸಹಕಾರ ನೀಡಬೇಕೆಂದು ಗಾಯಾಳು ರೈತನ ಕುಂಟುಂಬ ಆಗ್ರಹಿಸಿದೆ.

ABOUT THE AUTHOR

...view details