ಕಾರವಾರ: ಕರಡಿಗಳ ಗುಂಪೊಂದು ದಾಳಿ ಮಾಡಿದ ಪರಿಣಾಮ ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಜೊಯಿಡಾ ತಾಲೂಕಿನ ಅಸು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಳವೆದಾವೆ ಗ್ರಾಮದಲ್ಲಿ ನಡೆದಿದೆ.
ಕರಡಿ ದಾಳಿಯಿಂದ ವ್ಯಕ್ತಿಗೆ ಗಂಭೀರ ಗಾಯ; ಪರಿಹಾರ ನೀಡುವಂತೆ ಒತ್ತಾಯ - ಕರಡಿ ದಾಳಿ
ತಾಯಿ ಕರಡಿ ಜೊತೆ ಮರಿಗಳು ಸೇರಿ ವ್ಯಕ್ತಿಯೋರ್ವನ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಜೊಯಿಡಾ ತಾಲೂಕಿನ ಇಳವೆದಾವೆ ಗ್ರಾಮದಲ್ಲಿ ಜರುಗಿದೆ.
![ಕರಡಿ ದಾಳಿಯಿಂದ ವ್ಯಕ್ತಿಗೆ ಗಂಭೀರ ಗಾಯ; ಪರಿಹಾರ ನೀಡುವಂತೆ ಒತ್ತಾಯ bear attack in johida Ilavedave](https://etvbharatimages.akamaized.net/etvbharat/prod-images/768-512-8604924-thumbnail-3x2-dkdk.jpg)
ಪ್ರಕಾಶ ದೇಸಾಯಿ ಗಾಯಗೊಂಡವರು. ಮನೆಯಿಂದ ಮಗನೊಂದಿಗೆ ಹೊಲಕ್ಕೆ ತೆರಳುತ್ತಿದ್ದ ವೇಳೆ ತಾಯಿ ಹಾಗೂ ಎರಡು ಕರಡಿ ಮರಿಗಳು ಒಮ್ಮೆಲೆ ದಾಳಿ ಮಾಡಿವೆ. ಬಳಿಕ ಮಗ ಮತ್ತು ಸ್ಥಳೀಯರು ಕರಡಿಗಳನ್ನು ಓಡಿಸಿದ್ದಾರೆ. ಘಟನೆಯಲ್ಲಿ ಪ್ರಕಾಶ ಅವರ ಮುಖ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿವೆ.
ತಕ್ಷಣ ಗಾಯಗೊಂಡಿದ್ದ ವ್ಯಕ್ತಿಯನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತದೆ. ಇದು ಜೊಯಿಡಾ ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ 10 ದಿನಗಳ ಅವಧಿಯಲ್ಲಿ ನಡೆದ ಎರಡನೇ ಕರಡಿ ದಾಳಿಯಾಗಿದೆ. ಅರಣ್ಯ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ ದಾಳಿಗೊಳಗಾದ ವ್ಯಕ್ತಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.