ಕಾರವಾರ: ಕೋವಿಡ್‌ನಿಂದ ಹದಗೆಟ್ಟ ಶಿಕ್ಷಣ ವ್ಯವಸ್ಥೆ ಸರಿಪಡಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ನನಗೆ ಕೇವಲ ಆರು ದಿನ ಸಮಯವಕಾಶ ನೀಡಿದ್ರೆ ಶಿಕ್ಷಣ ವ್ಯವಸ್ಥೆ ಸರಿಪಡಿಸಿ ತೋರಿಸುತ್ತೇನೆ. ಸರಿಪಡಿಸದಿದ್ರೆ ನನ್ನ ಹೆಸರನ್ನು ಹೇಳಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸವಾಲು ಹಾಕಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದರಿಂದ ಎಂಟರವರೆಗಿನ ಮಕ್ಕಳಿಗೆ ಮೊದಲಿನಿಂದಲು ಕ್ಲಾಸ್ ಬೇಡ ಎಂದು ಹೇಳುತ್ತಿದ್ದೆ. ಉಳಿದಂತೆ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ 10 ಮಕ್ಕಳಂತೆ ವಿಂಗಡಿಸಿ ಪ್ರತ್ಯೇಕವಾಗಿ ತರಗತಿ ತೆಗೆದುಕೊಳ್ಳುವಂತೆ ಪತ್ರ ಬರೆದು ಸರ್ಕಾರಕ್ಕೆ ಸಲಹೆ ನೀಡಿದ್ದೆ.
ಅಲ್ಲದೆ ಕೋವಿಡ್ ವೇಳೆ ರಿಕ್ಷಾ ಚಾಲಕರು, ಕಾರ್ಮಿಕರಿಗೆ ಪ್ಯಾಕೇಜ್ ನೀಡಿದಂತೆ ಶಿಕ್ಷಕರಿಗೂ ನೀಡುವಂತೆ ತಿಳಿಸಿದ್ದೆ. ಆದರೆ, ಸರ್ಕಾರ ನಮ್ಮಂತ ಅನುಭವಸ್ಥರು ನೀಡುವ ಸಲಹೆಯನ್ನು ಕಿವಿಗೂ ಹಾಕಿಕೊಳ್ಳುತ್ತಿಲ್ಲ ಎಂದು ದೂರಿದರು.