ಕರ್ನಾಟಕ

karnataka

ETV Bharat / state

ಯಡಿಯೂರಪ್ಪನವರನ್ನು ಸಮಾಧಾನ ಮಾಡಿಕೊಂಡು ಹೋದ್ರೆ ಸರ್ಕಾರ ಉಳಿಯುತ್ತೆ; ಬಸವರಾಜ್ ಹೊರಟ್ಟಿ - Basavaraj Horatti latest news

ಸರ್ಕಾರದಲ್ಲಿ ಆಡಳಿತವೇ ನಡೆದಿಲ್ಲ‌‌. ಬರಿ ಮಂತ್ರಿ ತೆಗೆಯುವುದು ಸೇರಿಸುವುದರಲ್ಲಿಯೇ ಇದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

Basavaraj Horatti
ಬಸವರಾಜ್ ಹೊರಟ್ಟಿ

By

Published : Nov 30, 2020, 3:19 PM IST

ಕಾರವಾರ: ಮುಖ್ಯಮಂತ್ರಿ ಯಡಿಯೂರಪ್ಪನವರನ್ನ ಸಮಾಧಾನ ಮಾಡಿಕೊಂಡು ಹೋದ್ರೆ ಸರ್ಕಾರ ಉಳಿಯುತ್ತೆ. ಇಲ್ಲ ಅಂದ್ರೆ ಜೇನುಗೂಡಿಗೆ ಕಲ್ಲು ಹೊಡೆದ ಹಾಗಾಗುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಂದ್ಮೇಲೆ ಸಿಎಂ ಬದಲಾವಣೆ ವಿಚಾರ ಬರುವುದು ಮಾಮೂಲಿ. ಆದರೆ ಬಿಜೆಪಿ ಆಂತರಿಕ ಕಲಹದಿಂದ ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದೆ. ಸರ್ಕಾರ ಜನ ಸೇವೆ ಮಾಡುವ ಮನಸಿದ್ದಲ್ಲಿ ವಿರೋಧ ಸ್ಥಾನದಲ್ಲಿದ್ದೆ ಉತ್ತಮ ಕೆಲಸ ಮಾಡಬಹುದಿತ್ತು. ಅದನ್ನು ಬಿಟ್ಟು ಬೇರೆ ಪಕ್ಷದವರನ್ನು ಸೆಳೆದು ರಾಜಿನಾಮೆ ಕೊಡಿಸಿದ್ದಿರೋ ಅದೆ ರೀತಿ ತ್ಯಾಗ ಮಾಡಿ ಬಂದ ಎಲ್ಲ ಶಾಸಕರುಗೂ ಸಚಿವ ಸ್ಥಾನ ನೀಡಲೇ ಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ

ಸರ್ಕಾರದಲ್ಲಿ ಆಡಳಿತವೇ ನಡೆದಿಲ್ಲ‌‌. ಬರಿ ಮಂತ್ರಿ ತೆಗೆಯುವುದು ಸೇರಿಸುವುದರಲ್ಲಿಯೇ ಇದ್ದಾರೆ. ಸದ್ಯ ಯಡಿಯೂರಪ್ಪನವರನ್ನು ಸಮಾಧಾನ ಮಾಡಿಕೊಂಡು ಹೋದರೆ ಮಾತ್ರ ಸರ್ಕಾರ ಉಳಿಯುತ್ತೆ. ಇಲ್ಲ ಅಂದ್ರೆ ಲಿಂಗಾಯುತ ಸಮುದಾಯದವರು ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಬಸವಜಯಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ವಿಚಾರಕ್ಕೆ ಸ್ವಾಮೀಜಿಗಳು ರಾಜಕೀಯ ಮಾಡುವುದನ್ನು ಬಿಡಬೇಕು. ಬೇರೆ ಸ್ವಾಮೀಜಿಗಳಂತೆ ಮಠದಲ್ಲಿ ಕುಳಿತು ಭಕ್ತರಿಗೆ ಆಶಿರ್ವಚನ ನೀಡಬೇಕು. ಅದನ್ನು ಬಿಟ್ಟು ಈ ರಿತಿ ರಾಜಕೀಯ ಮಾಡಿ ಅವರನ್ನು ಮಂತ್ರಿ ಮಾಡಿ ಇವರನ್ನು ಮಂತ್ರಿ ಮಾಡಿ ಎಂದು ಹೇಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details