ಕರ್ನಾಟಕ

karnataka

ETV Bharat / state

ಬಿಎಸ್​ವೈಗೆ ತೊಂದ್ರೆ ಕೊಡಬಾರದು ಅನ್ನೋದು ಹೈಕಮಾಂಡ್​ಗೆ ಗೊತ್ತಾಗಿದೆ: ಯತ್ನಾಳ್​ - Basanagowda patil yatnal talking about BSY

ಸಿಎಂ ಯಡಿಯೂರಪ್ಪ ಅವರಿಗೆ ತೊಂದರೆ ನೀಡಿದಲ್ಲಿ ಮಹಾರಾಷ್ಟ್ರ ಸರ್ಕಾರದ ಪರಿಸ್ಥಿತಿ ಬರಲಿದೆ ಎಂದು ಮೇಲಿನವರಿಗೆ ಈಗ ತಿಳಿದಿದೆ. ಮೊದಲು ತೊಂದರೆ ನೀಡುತ್ತಿದ್ದರು. ಈಗ ಆ ಕಾಲ ಉಳಿದಿಲ್ಲ. ರಾಜ್ಯ, ಸ್ಥಳೀಯ ನಾಯಕತ್ವಕ್ಕೆ ಮಹತ್ವ ನೀಡಬೇಕು ಎನ್ನುವುದು ಹೈಕಮಾಂಡ್​ಗೆ ತಿಳಿದಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದವರಿಗೇ ಟಾಂಗ್ ನೀಡಿದ್ದಾರೆ.

Basavagowda Patil Yatnal
ಬಸವಗೌಡ ಪಾಟೀಲ್ ಯತ್ನಾಳ್

By

Published : Dec 10, 2019, 10:37 PM IST

ಶಿರಸಿ:ಯಡಿಯೂರಪ್ಪ ನೇತೃತ್ವಕ್ಕೆ ಯಾರೂ ತೊಂದರೆ ನೀಡಬಾರದು ಎಂಬ ಸ್ಪಷ್ಟ ಸಂದೇಶವನ್ನು ಕರ್ನಾಟಕದ ಜನತೆ ನೀಡಿದೆ. ಅದು ಮೇಲಿನವರಿಗೂ ಗೊತ್ತಾಗಿದೆ ಎಂದು ಮಾಜಿ ಕೇಂದ್ರ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದವರಿಗೇ ಟಾಂಗ್ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ತೊಂದರೆ ನೀಡಿದಲ್ಲಿ ಮಹಾರಾಷ್ಟ್ರ ಸರ್ಕಾರದ ಪರಿಸ್ಥಿತಿ ಬರಲಿದೆ ಎಂದು ಮೇಲಿನವರಿಗೆ ಈಗ ತಿಳಿದಿದೆ. ಮೊದಲು ತೊಂದರೆ ನೀಡುತ್ತಿದ್ದರು. ಈಗ ಆ ಕಾಲ ಉಳಿದಿಲ್ಲ. ರಾಜ್ಯ, ಸ್ಥಳೀಯ ನಾಯಕತ್ವಕ್ಕೆ ಮಹತ್ವ ನೀಡಬೇಕು ಎಂದು ಹೈಕಮಾಂಡ್​ಗೆ ತಿಳಿದಿದೆ ಎಂದರು.

ಯತ್ನಾಳ್​ಗೆ ಮಂತ್ರಿಗಿರಿ ಸಿಗಬಾರದು ಎಂದು ಲಾಬಿ ಮಾಡುತ್ತಾರೆ. ಆದರೆ ನನಗೆ ಮಂತ್ರಿ ಆಗುವ ಆಸೆ ಇಲ್ಲ. ಅವರು ಕೊಟ್ಟರೆ ಮಾಡುತ್ತೇನೆ. ಮೊನ್ನೆಯೂ ನನ್ನನ್ನು ಸ್ಟಾರ್ ಪ್ರಚಾರಕ ಮಾಡಿಲ್ಲ. ಆದರೆ ಸ್ಟಾರ್ ಪ್ರಚಾರಕ ಬೋರ್ಡ್​ ಹಾಕಿಕೊಂಡವರಿಗೆ 10 ಜನ ಕೂಡಲಿಲ್ಲ. ಆ ಕಾರಣಕ್ಕೆ ಮುಂದಿನ ದಿನಗಳಲ್ಲಿ ನಮಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕಾಗಿದೆ. ಯಾವುದೋ ರೂಮಿನಲ್ಲಿ ಕುಳಿತು ಸಭೆ ಮಾಡುವವರಿಗೆ ನಾಯಕತ್ವ ನೀಡಿದಲ್ಲಿ ಠೇವಣಿ ಕಳೆದುಕೊಳ್ಳಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

ಪಕ್ಷ ಮತ್ತು ಸರ್ಕಾರ ಸಮನ್ವಯತೆಯಿಂದ ಹೋಗಬೇಕು. ಸಮನ್ವಯ ಕಳೆದುಕೊಂಡಲ್ಲಿ ಯಡಿಯೂರಪ್ಪನವರಿಗೆ ಸರ್ಕಾರ ಹೇಗೆ ನಡೆಸಿಕೊಂಡು ಹೋಗಬೇಕೆಂದು ತಿಳಿದಿದೆ. ಆಗ ಸಂಘಟನೆ ಬೇರೆ ಸರ್ಕಾರ ಬೇರೆ ಆಗುತ್ತದೆ. ಅದಕ್ಕೆ ಹೈಕಮಾಂಡ್ ಅವಕಾಶ ನೀಡುವುದಿಲ್ಲ. ಕರ್ನಾಟಕದಲ್ಲಿ ಯಡಿಯೂರಪ್ಪ ಜನನಾಯಕ ಎಂದು ತಿಳಿದಿದೆ. 10 ಓಟು ಇಲ್ಲದವರು ಯಾರನ್ನೋ ಇಳಿಸುತ್ತೇನೆ ಎಂದರೆ ಆಗುವುದಿಲ್ಲ ಎಂದರು.‌

ಕರ್ನಾಟಕದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಬೇಕು ಎಂಬ ಉದ್ದೇಶದಿಂದ ಜನ ಬಿಜೆಪಿಯನ್ನು ಅಯ್ಕೆ ಮಾಡಿದ್ದಾರೆ. ಮುಂದಿನ 3.5 ವರ್ಷ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಜನಪರ ಕಾರ್ಯ ಮಾಡಲು, ಪ್ರವಾಹ ಪೀಡಿತರಿಗೆ, ರೈತರಿಗೆ ಸಾಲಮನ್ನಾ, ನೀರಾವರಿ ಯೋಜನೆ ಮಾಡಲು ಜನಾದೇಶ ನೀಡಿದೆ ಎಂದರು.

ABOUT THE AUTHOR

...view details