ಕರ್ನಾಟಕ

karnataka

ETV Bharat / state

ಫೆ.8 ರಿಂದ 2 ದಿನ ಬನವಾಸಿ ಕದಂಬೋತ್ಸವ.. ಶಾಸಕ ಶಿವರಾಮ ಹೆಬ್ಬಾರ್​ - Yellapur MLA Shivarama Hebbar

ಉತ್ಸವದಲ್ಲಿ ನಡೆಯಬೇಕಾದ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ವಿವಿಧ ಜನಪ್ರತಿನಿಧಿಗಳು ಹಾಜರಿದ್ದರು.

banavasi-kadambotsavam-on-february-8th-and-9th
banavasi-kadambotsavam-on-february-8th-and-9th

By

Published : Jan 18, 2020, 8:57 PM IST

ಶಿರಸಿ :ರಾಜ್ಯ ಪ್ರಸಿದ್ಧ ಬನವಾಸಿ ಕದಂಬೋತ್ಸವ ಫೆಬ್ರವರಿ 8 ಮತ್ತು 9ರಂದು ನಡೆಯಲಿದೆ. ಮುಖ್ಯಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕದಂಬೋತ್ಸವ ಪೂರ್ವ ತಯಾರಿ ಸಭೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಮಾಹಿತಿ ನೀಡಿದರು. ಆದರೆ, ಉತ್ಸವದ ಅಧಿಕೃತ ಘೋಷಣೆಯನ್ನು ಜಿಲ್ಲಾ‌ಉಸ್ತುವಾರಿ ಸಚಿವರು ಮಾಡಲಿದ್ದಾರೆ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದರು.

ಫೆ.8, 9ಕ್ಕೆ ಬನವಾಸಿ ಕದಂಬೋತ್ಸವ..

ಇಲ್ಲಿನ ಮಿನಿ ವಿಧಾನಸೌಧದಲ್ಲಿ ನಡೆದ ಕದಂಬೋತ್ಸವ ಪೂರ್ವ ತಯಾರಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಫೆ.6ರಂದು ಕದಂಬ ಜ್ಯೋತಿ ಹೊರಡಲಿದೆ. 8 ಮತ್ತು 9ರಂದು ಮಯೂರ ವರ್ಮ ವೇದಿಕೆಯಲ್ಲಿ ಮುಖ್ಯ ಉತ್ಸವ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ಸಭಾಧ್ಯಕ್ಷರು ಮಾಹಿತಿ ನೀಡಿದ್ದು, ಎಲ್ಲಾ ಕಾರ್ಯಕ್ರಮಗಳ ಅಧಿಕೃತ ಘೋಷಣೆಯನ್ನು ಜಿಲ್ಲಾ ಉಸ್ತುವಾರಿಗಳು ಮಾಡಲಿದ್ದಾರೆ ಎಂದು ತಿಳಿಸಿದರು.

ಉತ್ಸವದಲ್ಲಿ ನಡೆಯಬೇಕಾದ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತುಸಭೆಯಲ್ಲಿಚರ್ಚಿಸಲಾಯಿತು. ಈ ವೇಳೆ ವಿವಿಧ ಜನಪ್ರತಿನಿಧಿಗಳು ಹಾಜರಿದ್ದರು.

ABOUT THE AUTHOR

...view details