ಕರ್ನಾಟಕ

karnataka

ETV Bharat / state

ರುಪ್ಸಾದಿಂದ ಬಂದಿರುವ ಪತ್ರಕ್ಕೆ ಪ್ರಧಾನಿ ಸರಿಯಾದ ಕ್ರಮ ಕೈಗೊಳ್ಳುವ ವಿಶ್ವಾಸವಿದೆ: ಬಿ.ಸಿ.ನಾಗೇಶ

ಇಲಾಖೆಯಲ್ಲಿ ನಾನು ಮಾಡಿದ ಅಭಿವೃದ್ಧಿ ಕೆಲಸವನ್ನು ಸಹಿಸಲಾರದೇ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಮೋದಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಭರವಸೆ ಇದೆ ಎಂದು ಬಿ ಸಿ ನಾಗೇಶ್​ ಹೇಳಿದರು.

B C Nagesh
ಬಿ.ಸಿ.ನಾಗೇಶ

By

Published : Jul 13, 2022, 8:42 PM IST

ಶಿರಸಿ(ಉತ್ತರ ಕನ್ನಡ) :ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ)ವು ನನ್ನನ್ನು ಸಚಿವ ಸಂಪುಟದಿಂದ ವಜಾ ಗೊಳಿಸುವಂತೆ ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ಸರಿಯಾದ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು.

ರುಪ್ಸಾದಿಂದ ಬಂದಿರುವ ಪತ್ರಕ್ಕೆ ಪ್ರಧಾನಿಯವರು ಸರಿಯಾದ ಕ್ರಮ ಕೈಗೊಳ್ಳುವ ವಿಶ್ವಾಸವಿದೆ

ಶಿರಸಿಯ ಮಾರಿಕಾಂಬಾ ದೇವಾಲಯದಲ್ಲಿ ಮಾರಿಕಾಂಬೆಗೆ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶಿಕ್ಷಣ ಸಚಿವರು, ಪಠ್ಯಪುಸ್ತಕ ಪರಿಷ್ಕರಣಾ ವಿಚಾರ ಸೇರಿದಂತೆ ಇಲಾಖೆಯ ಆಡಳಿತದ ಕುರಿತು ಮೋದಿಯವರಿಗೆ ಪತ್ರ ಬರೆಯಲಾಗಿದೆ. ಜತೆಗೆ ಸಂಪುಟದಿಂದ ನನ್ನನ್ನು ವಜಾಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚಿಸುವಂತೆಯೂ ಆಗ್ರಹಿಸಿದ್ದಾರೆ ಎಂದರು.

ಆದರೆ, ಇಲಾಖೆಯಲ್ಲಿ ನಾನು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಇದನ್ನು ಸಹಿಸಲು ಕೆಲ ಶಿಕ್ಷಣ ಸಂಸ್ಥೆಗಳಿಗೆ ಕಷ್ಟವಾಗಿದೆ. ತಿನ್ನಲು ಸಿಗದ ದ್ರಾಕ್ಷಿ ಹುಳಿ ಎಂಬ ಮಾತಿನಂತೆ ಇಂಥ ಕೆಲವು ಸಂಸ್ಥೆಗಳು ನನ್ನ ಬಗ್ಗೆ ಪ್ರಧಾನಿ ಯವರಿಗೆ ಪತ್ರ ಬರೆದಿದ್ದಾರೆ. ಇಲಾಖೆಯ ಕಠಿಣ ಕಾರ್ಯವೈಖರಿಯಿಂದ ಹೊಟ್ಟೆನೋವು ಬಂದ ಕೆಲವರು ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಮಲೆನಾಡಿನ ಶಾಲೆಗಳ ಉಳಿಸುವ ನಿಟ್ಟಿನಲ್ಲಿ ಮಕ್ಕಳ ಅನುಪಾತ ಕಡಿಮೆ ಮಾಡಲು ಇಲಾಖೆಗೆ ಮನವಿಗಳು ಬಂದಿವೆ. ಆದರೆ, ಇಲಾಖೆ ಮಾನದಂಡದ ಪ್ರಕಾರ ಪ್ರತಿ ತರಗತಿಗೆ 30 ಮಕ್ಕಳು ಇರುವುದು ಕಡ್ಡಾಯವಾಗಿದೆ. ಒಂದೊಮ್ಮೆ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆ ಮುಚ್ಚುವ ಸಮಸ್ಯೆ ಎದುರಾದರೆ ಮುಂಬರುವ ದಿನಗಳಲ್ಲಿ ಸೂಕ್ತ ಕ್ರಮ ವಹಿಸಲಾಗುವುದು. ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದರು.

ಇದನ್ನೂ ಓದಿ :ಬಿಜೆಪಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ; ಕಾಂಗ್ರೆಸ್​ಗೆ ಬರೋದು ಜಸ್ಟ್​ 50-60 ಸ್ಥಾನ: ರೇಣುಕಾಚಾರ್ಯ

ABOUT THE AUTHOR

...view details