ಕರ್ನಾಟಕ

karnataka

ETV Bharat / state

ಇವು ಬರೀ ಚಿತ್ರಗಳಲ್ರೀಪಾ.. ಜನರಿಗೆ ಅರಿವು ಮೂಡಿಸೋ ಕಲಾಕೃತಿಗಳು.. - ವಾಲ್ ಪೇಂಟಿಂಗ್ ಸ್ಪರ್ಧೆ

ಕೊರೊನಾ ಜಾಗೃತಿ, ವ್ಯಾಕ್ಸಿನ್ ಮಹತ್ವ ಸಾರುವ ಚಿತ್ರಗಳು, ಮಳೆ ನೀರು ಸಂರಕ್ಷಣೆ, ಪರಿಸರ ಸ್ವಚ್ಛತೆ ಕುರಿತಾದ ಹತ್ತಕ್ಕೂ ಹೆಚ್ಚು ಆಕರ್ಷಕ ಚಿತ್ರಗಳನ್ನ ಸ್ಪರ್ಧಿಗಳು ಬಿಡಿಸಿದರು. ಸ್ಪರ್ಧೆಗೆ ಇಲಾಖೆ ವತಿಯಿಂದಲೇ ಪೇಂಟ್‌ನ ನೀಡಲಾಗಿತ್ತು. ಅಲ್ಲದೆ, ಮಳೆಗಾಲದಲ್ಲೂ ಚಿತ್ರಗಳು ಹಾಳಾಗಬಾರದು ಎನ್ನುವ ನಿಟ್ಟಿನಲ್ಲಿ ಆಯಿಲ್ ಪೇಂಟ್‌ಗಳನ್ನ ಬಳಕೆ ಮಾಡಲಾಗಿತ್ತು..

wall-painting-competition
ವಾಲ್ ಪೇಂಟಿಂಗ್ ಸ್ಪರ್ಧೆ

By

Published : Dec 17, 2021, 7:18 AM IST

ಕಾರವಾರ :ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರಸಭೆ ಆವರಣ ಈಗ ಬಣ್ಣ ಬಣ್ಣದ ಚಿತ್ತಾರಗಳಿಂದಾಗಿ ಗಮನ ಸೆಳೆಯುತ್ತಿದೆ. ಬರೀ ಬಣ್ಣ ಅಷ್ಟೇ ಅಲ್ಲ, ಚಿತ್ರಣಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿರುವುದು ವಿಶೇಷ.

ಖಾಲಿ ಗೋಡೆಗೆ ಅಂದದ ಸ್ಪರ್ಶ

ಕಾರವಾರದನೆಹರೂ ಯುವಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಾಲ್ ಪೇಂಟಿಂಗ್ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. ಮಳೆ ನೀರು ಕೊಯ್ಲು, ಕೊರೊನಾ ವ್ಯಾಕ್ಸಿನ್ ಹಾಗೂ ಸ್ವಚ್ಛ ಭಾರತ ಕುರಿತು ಜಾಗೃತಿ ಮೂಡಿಸುವ ಚಿತ್ರಗಳನ್ನ ಬಿಡಿಸಲು ಸ್ಪರ್ಧೆ ಆಯೋಜಿಸಲಾಗಿತ್ತು. 18 ರಿಂದ 29ರ ವಯೋಮಾನದ ವಿದ್ಯಾರ್ಥಿಗಳಿಗಾಗಿಯೇ ವಿಶೇಷವಾಗಿ ಅವಕಾಶ ನೀಡಲಾಗಿತ್ತು.

ಅದರಂತೆ ಕಾರವಾರ ನಗರಸಭೆಯ ಕಾಂಪೌಂಡ್‌ ಗೋಡೆಗಳ ಮೇಲೆ ಚಿತ್ರ ರಚನೆಗೆ ಅವಕಾಶ ನೀಡಲಾಗಿತ್ತು. ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಜಾಗೃತಿ ಮೂಡಿಸುವಂತಹ ಚಿತ್ರಗಳನ್ನ ರಚಿಸಿದ್ದಾರೆ. ವಿದ್ಯಾರ್ಥಿಗಳನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರೋತ್ಸಾಹಧನವನ್ನ ನೀಡಲಾಗಿದೆ. ಉತ್ತಮ ಚಿತ್ರಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ನಗದು ಹಾಗೂ ಸರ್ಟಿಫಿಕೇಟ್‌ನ ಕೂಡ ನೀಡಲಾಯ್ತು.

ಸ್ಪರ್ಧೆಯಲ್ಲಿ ಸುಮಾರು 15ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ನೀಡಲಾಗಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಕೊರೊನಾ ಜಾಗೃತಿ, ವ್ಯಾಕ್ಸಿನ್ ಮಹತ್ವ ಸಾರುವ ಚಿತ್ರಗಳು, ಮಳೆ ನೀರು ಸಂರಕ್ಷಣೆ, ಪರಿಸರ ಸ್ವಚ್ಛತೆ ಕುರಿತಾದ ಹತ್ತಕ್ಕೂ ಹೆಚ್ಚು ಆಕರ್ಷಕ ಚಿತ್ರಗಳನ್ನ ಸ್ಪರ್ಧಿಗಳು ಬಿಡಿಸಿದರು. ಸ್ಪರ್ಧೆಗೆ ಇಲಾಖೆ ವತಿಯಿಂದಲೇ ಪೇಂಟ್‌ನ ನೀಡಲಾಗಿತ್ತು. ಅಲ್ಲದೆ, ಮಳೆಗಾಲದಲ್ಲೂ ಚಿತ್ರಗಳು ಹಾಳಾಗಬಾರದು ಎನ್ನುವ ನಿಟ್ಟಿನಲ್ಲಿ ಆಯಿಲ್ ಪೇಂಟ್‌ಗಳನ್ನ ಬಳಕೆ ಮಾಡಲಾಗಿತ್ತು.

ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇತ್ತು. ಆದ್ರೆ, ಕೊರೊನಾ ಕಾರಣ ಕಡಿಮೆ ಸಂಖ್ಯೆಯ ಮಕ್ಕಳು ಮಾತ್ರ ಆಗಮಿಸಿದ್ದರು. ಮುಂದಿನ ದಿನಗಳಲ್ಲಿ ಮತ್ತೆ ಇಂತಹುದೇ ಜಾಗೃತಿ ಸ್ಪರ್ಧೆಯನ್ನ ಆಯೋಜಿಸೋದಾಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details