ಶಿರಸಿ:ನಗರದಲ್ಲಿ ಮತ್ತೇ ಜಾನುವಾರು ಕಳ್ಳತನ ಸದ್ದು ಮಾಡಿದೆ. ರಸ್ತೆಯ ಪಕ್ಕದಲ್ಲಿ ಮಲಗಿಕೊಂಡಿದ್ದ ಆಕಳು ಕರುವೊಂದನ್ನು ಕಾರಿಗೆ ತುಂಬಲು ದುಷ್ಕರ್ಮಿಗಳು ವಿಫಲ ಪ್ರಯತ್ನ ನಡೆಸಿದ ಘಟನೆ ಇಲ್ಲಿನ ಹೊಸಪೇಟೆ ರಸ್ತೆಯಲ್ಲಿ ನಡೆದಿದೆ.
ಶಿರಸಿಯಲ್ಲಿ ನಡುರಾತ್ರಿ ಆಕಳು, ಕರುವನ್ನು ಗಾಡಿಗೆ ತುಂಬಲು ಯತ್ನಿಸಿದ ಗೋ ಕಳ್ಳರು: ಕೊನೆಗೇನಾಯ್ತು? - ಆಕಳು ಕರುವನ್ನು ಗಾಡಿಗೆ ತುಂಬಲು ಯತ್ನ
ಶಿರಸಿಯಲ್ಲಿ ಮತ್ತೇ ಜಾನುವಾರು ಕಳ್ಳತನ ಸದ್ದು ಮಾಡಿದೆ. ರಸ್ತೆಯ ಪಕ್ಕದಲ್ಲಿ ಮಲಗಿಕೊಂಡಿದ್ದ ಆಕಳು ಕರುವೊಂದನ್ನು ಕಾರಿಗೆ ತುಂಬಲು ದುಷ್ಕರ್ಮಿಗಳು ವಿಫಲ ಪ್ರಯತ್ನ ನಡೆಸಿದ ಘಟನೆ ಇಲ್ಲಿನ ಹೊಸಪೇಟೆ ರಸ್ತೆಯಲ್ಲಿ ನಡೆದಿದೆ.
ಕಳೆದ ವರ್ಷ ಹೊಸ ಬಸ್ ನಿಲ್ದಾಣದ ಬಳಿ ನಡೆದಂತೆ ಈ ಬಾರಿ ಹೊಸಪೇಟೆ ರಸ್ತೆಯಲ್ಲಿ ಮಧ್ಯರಾತ್ರಿ ಮಲಗಿದ್ದ ಆಕಳು ಕರುವನ್ನು ಗೋಕಳ್ಳರು ಗಾಡಿಯ ಡಿಕ್ಕಿಗೆ ತುಂಬಿಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಮಧ್ಯರಾತ್ರಿ 1.49 ಕ್ಕೆ ಘಟನೆ ಜರುಗಿದ್ದು, ಆಕಳು ಕರು ಕೊನೆ ಕ್ಷಣದಲ್ಲಿ ತಪ್ಪಿಸಿಕೊಳ್ಳಲು ಯಶಸ್ಸು ಕಂಡಿದೆ. ಸಂಪೂರ್ಣ ಘಟನೆ ಸಿಸಿಟಿಯಲ್ಲಿ ದಾಖಲಾಗಿದೆ.
ಇನ್ನು ಸಿಸಿಟಿವಿ ದೃಶ್ಯಾವಳಿಗಳು ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕವಾಗಿ ಹರಡಿದೆ. ಇದರಿಂದ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದ್ದು, ಕಳ್ಳರ ಹಾವಳಿ ತಡೆಗಟ್ಟಬೇಕು ಎಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ. ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.