ಕರ್ನಾಟಕ

karnataka

ETV Bharat / state

ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ: ನಾಡ ಬಂದೂಕಿನ ಜೊತೆ ಆರೋಪಿಗಳ ಬಂಧನ - ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿರುವ ಕಾಯ್ದೆ

ಪರವಾನಗಿ ಇಲ್ಲದ ನಾಡ ಬಂದೂಕನ್ನು ವಶಪಡಿಸಿಕೊಳ್ಳಲು ಹೋದ ಅರಣ್ಯಾಧಿಕಾರಿಗಳ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಭಟ್ಕಳದ ಅರಣ್ಯ ಅಧಿಕಾರಿ ಆರ್​​ಎಫ್ಒ ಸವಿತಾ ದೇವಾಡಿಗ ಹಲ್ಲೆಗೊಳಗಾದ ಅಧಿಕಾರಿ. ಆರೋಪಿಗಳನ್ನು ಬಂಧಿಸಿದ ಅಧಿಕಾರಿಗಳು, ಅವರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿರುವ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.

ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ

By

Published : Sep 29, 2019, 4:33 PM IST

ಕಾರವಾರ: ಪರವಾನಗಿ ಇಲ್ಲದ ನಾಡ ಬಂದೂಕನ್ನು ವಶಪಡಿಸಿಕೊಳ್ಳಲು ಹೋದ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಭಟ್ಕಳ ತಾಲೂಕಿನ ಗಡಿ ಭಾಗದ ಕೋಣಾರ ಪಂಚಾಯಿತಿ ವ್ಯಾಪ್ತಿಯ ಕೇಕ್ಕೊಡ ಗ್ರಾಮದ ಹೆಜ್ಜಿಲ ಬಳಿ ತಡರಾತ್ರಿ ನಡೆದಿದೆ.

ಭಟ್ಕಳದ ಅರಣ್ಯ ಅಧಿಕಾರಿಯಾದ ಆರ್​​ಎಫ್ಒ ಸವಿತಾ ದೇವಾಡಿಗ ಖಚಿತ ಮಾಹಿತಿ ಮೇರೆಗೆ ಕೋಣಾರ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಕೇಕ್ಕೊಡ ನಿವಾಸಿಯಾದ ಅಶೋಕ ಚಿಕ್ಕಯ್ಯ ಮಾರಾಠಿ ಎಂಬುವರ ಮನೆಯ ಮೇಲೆ ದಾಳಿ ನಡೆಸಿದ್ರು. ಬಳಿಕ ಅಕ್ರಮವಾಗಿ ಪರವಾನಗಿ ಇಲ್ಲದ ನಾಡ ಬಂದುಕನ್ನು ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

ನಾಡ ಬಂದೂಕಿನ ಜೊತೆ ಆರೋಪಿಗಳ ಬಂಧನ

ವಿಚಾರಣೆ ವೇಳೆ ಈ ಬಂದೂಕು ಬೈಂದೂರು ತಾಲೂಕಿನ ತೂದಳ್ಳಿ ನಂದರಗದ್ದೆಯ ನಿವಾಸಿ ವಿಲ್ಸಂಟ ಸೆಬಾಸ್ಟಿನ್ (40) ಎಂಬುವವರಿಗೆ ಸೇರಿರುವುದೆಂದು ತಿಳಿದು ಬಂದಿದೆ. ನಂತರ ಬೈಂದೂರು ಅರಣ್ಯ ಅಧಿಕಾರಿಗಳ ಸಮೇತ ಎರಡನೇ ಆರೋಪಿ ವಿಲ್ಸಂಟ ಸೆಬಾಸ್ಟಿನ್ ಮನೆಗೆ ಬಂಧನಕ್ಕೆ ತೆರಳಿದಾಗ, ಎರಡನೇ ಆರೋಪಿಯ ಅಣ್ಣ ಬೈಂದೂರು ಅರಣ್ಯ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.

ಈ ಸಂಬಂಧ ಶ್ರೀಕಾಂತ ಪವರ್ ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಿ ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿರುವ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾರವಾರ ಜೈಲಿಗೆ ಕಳುಹಿಸಿದ್ದಾರೆ. ಈ ಬಗ್ಗೆ ಆ ವಲಯದ ಅರಣ್ಯಾಧಿಕಾರಿ ಶ್ರೀಕಾಂತ ಪವರ್ ದೂರು ನೀಡಿದ್ದಾರೆ. ನಂತರ ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದವರ ಮೇಲೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details