ಕರ್ನಾಟಕ

karnataka

ETV Bharat / state

ಈ ಮನೆಗೆ ದಿನವೂ ಬಂದು ಹೋಗುತ್ತೆ ಹಾರ್ನ್​ ಬಿಲ್​... ಹಕ್ಕಿಗೂ ಕುಟುಂಬಕ್ಕೂ ಇರುವ ಬಾಂಧವ್ಯ ಹೇಗಿದೆ ಅಂತಾ ನೀವೇ ನೋಡಿ! - Attachment of a Uttara Kannada family with Bird

ಮನೆಯವರಿಗೂ ಹಾರ್ನ್ ಬಿಲ್ ಹಕ್ಕಿ ಕಂಡ್ರೆ ಪಂಚಪ್ರಾಣ. ಮನೆಗೆ ಬರುವುದನ್ನೇ ಪ್ರತಿನಿತ್ಯ ಎದುರು ನೋಡುವ ಮಕ್ಕಳು ಮನೆಯಲ್ಲಿ ಮಾಡಿದ ಚಪಾತಿ, ದೋಸೆ ಹಾಗೂ ಬಾಳೆಹಣ್ಣು ನೀಡಿದಾಗ ಖುಷಿಯಿಂದಲೇ ಈ ಹಕ್ಕಿ ಸೇವನೆ ಮಾಡುತ್ತದೆ. ಅದರಲ್ಲಿಯೂ ಜಿಲೇಬಿ ಅಂದ್ರೆ ಹಕ್ಕಿಗೆ ತುಂಬಾ ಇಷ್ಟವಂತೆ.

Attachment of a family with Bird
ಹಕ್ಕಿಯೊಂದಿಗೆ ಬಾಂಧವ್ಯ ಬೆಸೆದುಕೊಂಡ ಕುಟುಂಬ

By

Published : Aug 18, 2020, 10:29 AM IST

Updated : Aug 18, 2020, 1:53 PM IST

ಕಾರವಾರ: ಬಾಂಧವ್ಯ ಅನ್ನೋದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಅದ್ಯಾವ ಬಂಧನವೋ ಗೊತ್ತಿಲ್ಲ. ಕೆಲವೊಂದು ಪ್ರಾಣಿ-ಪಕ್ಷಿಗಳು ಮಾನವರೊಂದಿಗೂ ಬೆರೆತು ಆಶ್ಚರ್ಯವನ್ನುಂಟು ಮಾಡುತ್ತವೆ. ಅಪರೂಪದ ಪಕ್ಷಿಯೊಂದು ಕುಟುಂಬವೊಂದರಲ್ಲಿ ತಾನೂ ಕೂಡ ಒಬ್ಬ ಸದಸ್ಯನಾಗಿಬಿಟ್ಟಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಿಕೇರಿ ಗ್ರಾಮದ ಕೃಷ್ಣಾನಂದ ಶೆಟ್ಟಿ ಎಂಬುವವರ ಮನೆಗೆ ಪ್ರತಿನಿತ್ಯ ಬರುವ "ಹಾರ್ನ್ ಬಿಲ್" ಹಕ್ಕಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಮೂರು ಹೊತ್ತು ಮನೆ ಬಾಗಿಲಿಗೆ ಹಾರಿ ಬರುವ ಹಕ್ಕಿ ಮನೆಯವರೊಂದಿಗೆ ಆತ್ಮೀಯ ಒಡನಾಟ ಬೆಳಸಿಕೊಂಡಿದೆ. ವಿಶೇಷ ಅಂದ್ರೆ ಸುತ್ತಮುತ್ತ ಹತ್ತಾರು ಮನೆಗಳಿದ್ರೂ ಕೂಡ ಈ ಹಕ್ಕಿ ಮಾತ್ರ ತಪ್ಪದೆ ಕೃಷ್ಣಾನಂದ ಅವರ ಮನೆಗೆ ಬರುತ್ತದೆ.

ಹಕ್ಕಿಗೂ ಕುಟುಂಬಕ್ಕೂ ಇರುವ ಬಾಂಧವ್ಯ ಹೇಗಿದೆ ಅಂತಾ ನೀವೇ ನೋಡಿ

ಮನೆಯವರಿಗೂ ಹಾರ್ನ್ ಬಿಲ್ ಹಕ್ಕಿ ಕಂಡ್ರೆ ಪಂಚಪ್ರಾಣ. ಮನೆಗೆ ಬರುವುದನ್ನೇ ಪ್ರತಿನಿತ್ಯ ಎದುರು ನೋಡುವ ಮಕ್ಕಳು ಮನೆಯಲ್ಲಿ ಮಾಡಿದ ಚಪಾತಿ, ದೋಸೆ ಹಾಗೂ ಬಾಳೆಹಣ್ಣು ನೀಡಿದಾಗ ಖುಷಿಯಿಂದಲೇ ಈ ಹಕ್ಕಿ ಸೇವನೆ ಮಾಡುತ್ತದೆ. ಅದರಲ್ಲಿಯೂ ಜಿಲೇಬಿ ಅಂದ್ರೆ ಹಕ್ಕಿಗೆ ತುಂಬಾ ಇಷ್ಟವಂತೆ.

ಮೌನ ಮಾತಿನ ಬಾಂಧವ್ಯ

ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡುಬರುವ ಈ ಹಕ್ಕಿಗಳು ದಾಂಡೇಲಿ ಭಾಗದಲ್ಲಿ ಹೇರಳವಾಗಿವೆ. ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆಯೂ ಅಪರೂಪಕ್ಕೊಂದು ಗೋಚರಿಸುತ್ತವೆ. ಕನ್ನಡದಲ್ಲಿ ಇದನ್ನು ಮಂಗಟ್ಟೆ ಎಂದು ಕರೆಯುತ್ತಾರೆ. ಉದ್ದ ಕೊಕ್ಕು ಹೊಂದಿದ್ದು, ಗಾತ್ರದಲ್ಲಿಯೂ ದೊಡ್ಡದಾಗಿರುತ್ತದೆ.

ಮಕ್ಕಳೊಂದಿಗೆ ಆಟವಾಡುತ್ತಿರುವ ಹಕ್ಕಿ

ಹಾರ್ನ್ ಬಿಲ್ ಹಕ್ಕಿ ಕೃಷ್ಣಾನಂದ ಅವರ ಮನೆಗೆ ಬರುತ್ತಿರುವುದನ್ನು ತಿಳಿದ ಅವರ ಸಂಬಂಧಿಕರು ಹಾಗೂ ಜನರು ಬಂದು ಹಕ್ಕಿಯ ಒಡನಾಟ ನೋಡಿಕೊಂಡು ಹೋಗುತ್ತಿದ್ದಾರೆ. ಮೊದ ಮೊದಲು ಹೆಚ್ಚಿನ ಜನರನ್ನು ಕಂಡರೆ ಹೆದರುತ್ತಿದ್ದ ಹಕ್ಕಿ ಇದೀಗ ಯಾರೇ ಬಂದರು ಅವರೊಂದಿಗೆ ಸಲುಗೆಯಿಂದ ಇರುತ್ತದೆ. ಇದರಿಂದ ಮನೆಯರಿಗೂ ಒಂದು ದಿನವೂ ಹಕ್ಕಿಯನ್ನು ನೋಡದೇ ಇರಲಾರದಷ್ಟು ಬಾಂಧವ್ಯ ಬೆಸೆದುಕೊಂಡಿದೆ.

Last Updated : Aug 18, 2020, 1:53 PM IST

For All Latest Updates

ABOUT THE AUTHOR

...view details