ಕರ್ನಾಟಕ

karnataka

ETV Bharat / state

ಪತ್ನಿ, ಅತ್ತೆ, ಸಂಬಂಧಿಗೆ ಚಾಕು ಇರಿದ ಆರೋಪಿ ಬಂಧನ - ಭಟ್ಕಳ ನ್ಯಾಯಾಲಯ

ಆರೋಪಿ ಕೃಷ್ಣ ಹುವೈಯ್ಯ ಗೊಂಡನನ್ನು ಮಾರುಕೇರಿಯ ಆತನ ಮನೆಯಲ್ಲಿ ಬಂಧಿಸಿದ ಪೊಲೀಸರು ಹಲ್ಲೆಗೆ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ..

Krishna Gonda
ಕೃಷ್ಣ ಗೊಂಡ

By

Published : Nov 6, 2020, 3:38 PM IST

ಭಟ್ಕಳ: ಹೋಮ್ ಗಾರ್ಡ್ ಓರ್ವ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ತಡೆಯಲು ಬಂದ ಅತ್ತೆ ಹಾಗೂ ಸಂಬಂಧಿಕರ ಮೇಲೆಯೂ ಹಲ್ಲೆ ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೃಷ್ಣ ಹುವೈಯ್ಯ ಗೊಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಕೃಷ್ಣ ಹುವೈಯ್ಯ ಗೊಂಡನನ್ನು ಮಾರುಕೇರಿಯ ಆತನ ಮನೆಯಲ್ಲಿ ಬಂಧಿಸಿದ ಪೊಲೀಸರು ಹಲ್ಲೆಗೆ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಭಟ್ಕಳದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿ ಕೃಷ್ಣ ಗೊಂಡನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಜಿಲ್ಲಾ ಕಾರಾಗೃಹಕ್ಕೆ ಕೊಂಡೊಯ್ಯಲಾಗಿದೆ.

ABOUT THE AUTHOR

...view details