ಶಿರಸಿ:ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಯನ್ನು ತಡೆಯಲು ಹೋದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ನಾಲ್ಕೈದು ಜನರ ತಂಡ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ವಿರ್ನೋಲಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ: ದೂರು, ಪ್ರತಿದೂರು ದಾಖಲು
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ವಿರ್ನೋಲಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ, ಅಕ್ರಮ ಮರಳುಗಾರಿಕೆಯನ್ನು ತಡೆಯಲು ಹೋದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ನಾಲ್ಕೈದು ಜನರ ತಂಡ ಮಾರಣಾಂತಿಕ ಹಲ್ಲೆ ನಡೆಸಿದೆ.
ಸಂದೀಪ್ ಗೌಡ ಹಲ್ಲೆಗೊಳಗಾದ ಅರಣ್ಯ ಸಿಬ್ಬಂದಿಯಾಗಿದ್ದು, ತಲೆಗೆ ಹೆಚ್ಚಿನ ಹೊಡೆತ ಬಿದ್ದಿದ್ದು ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ :ವಿರ್ನೋಲಿ ಅರಣ್ಯ ಪ್ರದೇಶದಲ್ಲಿ ಹಳಿಯಾಳದ ಕೃಷ್ಣ ಷಡೇಕರ್, ದೇವರಾಜ್ ಎಂಬುವವರು ಅಕ್ರಮವಾಗಿ ಟ್ರಕ್ನೊಂದಿಗೆ ಪ್ರವೇಶಿಸಿದ್ದಾರೆ. ಈ ವೇಳೆ, ಇದನ್ನು ತಡೆದ ಸಂದೀಪ್ ಗೌಡ ಹಾಗೂ ಬಸವನ ಗೌಡ ಅರಣ್ಯ ಸಿಬ್ಬಂದಿ ತಡೆದಿದ್ದಾರೆ. ಈವೇಳೆ ಅರಣ್ಯ ಪಾಲಕ ಸಂದೀಪ್ ಗೌಡ ಹಾಗೂ ಕೃಷ್ಣ ರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಸಂದೀಪ್ ಗೌಡ ಕೃಷ್ಣ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಆತನಿಗೆ ಪೆಟ್ಟು ಬಿದ್ದಿದ್ದು ನಂತರ ಕೃಷ್ಣ ಮತ್ತು ಆತನ ತಂಡ ಸಂದೀಪ್ ಗೌಡರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಘಟನೆ ಸಂಬಂಧ ದಾಂಡೇಲಿ ಗ್ರಾಮಾಂತರ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.