ಕರ್ನಾಟಕ

karnataka

ETV Bharat / state

ಕಲೆಯ ಪ್ರದರ್ಶನಕ್ಕೆ ಸಿಗದ ಅವಕಾಶ ; ಮೂರು ವರ್ಷದಿಂದ ಸಂಕಷ್ಟಕ್ಕೆ ಜಾರಿದ ಬದುಕು! - Uttara Kannada District Artists Problems

ಜನವರಿ ತಿಂಗಳು ಬಂತೆಂದರೆ ಸಾಕು ಜಿಲ್ಲೆಯ ವಿವಿಧೆಡೆ ಹಲವಾರು ಜಾತ್ರೆಗಳು ಪ್ರಾರಂಭವಾಗುತ್ತವೆ. ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಹತ್ತು ಹಲವು ಜಾತ್ರೆಗಳು ನಡೆಯುವುದರಿಂದ ಕಲಾ ತಂಡಗಳಿಗೆ ಮೂರು ತಿಂಗಳುಗಳ ಕಾಲ ಉತ್ತಮ ಕೆಲಸ ಸಿಗುತ್ತಿತ್ತು. ಆದ್ರೆ, ಕಳೆದೆರಡು ವರ್ಷಗಳಿಂದ ಕೊರೊನಾ ಅಟ್ಟಹಾಸಕ್ಕೆ ಕಲಾವಿದರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ..

Artists From Uttara Kannada District Facing Problems
Artists From Uttara Kannada District Facing Problems

By

Published : Jan 25, 2022, 12:49 PM IST

ಕಾರವಾರ :ಉತ್ತರಕನ್ನಡದಲ್ಲಿ ಜಾತ್ರೆಗಳಿಗೇನೂ ಬರವಿಲ್ಲ. ಜನವರಿ ಪ್ರಾರಂಭದಿಂದ ಮಾರ್ಚ್ ಅಂತ್ಯದವರೆಗೆ ನೂರಾರು ಜಾತ್ರೆಗಳು ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಯುತ್ತವೆ.

ಈ ಜಾತ್ರೆಗಳಲ್ಲಿ ನಾಟಕ, ಯಕ್ಷಗಾನ, ನೃತ್ಯದಂತಹ ಕಲೆಗಳನ್ನ ವಿವಿಧ ಕಲಾತಂಡಗಳು ಪ್ರದರ್ಶಿಸುವುದು ಒಂದು ಆಕರ್ಷಣೆಯಾಗಿರುತ್ತಿತ್ತು. ಆದ್ರೆ, ಕಳೆದೆರಡು ವರ್ಷಗಳಿಂದ ಕೊರೊನಾ ಅಬ್ಬರದಿಂದಾಗಿ ಕಲೆಯ ಪ್ರದರ್ಶನಕ್ಕೆ ಅವಕಾಶ ಸಿಗದಂತಾಗಿದೆ. ಇದೀಗ ಕಲಾವಿದರು ಬದುಕು ಸಾಗಿಸುವುದೇ ಕಷ್ಟ ಎನ್ನುವಂತಾಗಿದೆ.

ಕೊರೊನಾ ಅಬ್ಬರ ಜನರ ಜೀವನಶೈಲಿಯನ್ನೇ ಬದಲಿಸಿದೆ. ಸಾಕಷ್ಟು ಕ್ಷೇತ್ರಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮವನ್ನೂ ಬೀರಿದೆ. ಸದ್ಯ ವೀಕೆಂಡ್ ಕರ್ಫ್ಯೂ ತೆರವುಗೊಳಿಸಿದ್ದಕ್ಕೆ ಹಲವು ವಲಯಗಳ ಜನರು ಸಂತಸ ವ್ಯಕ್ತಪಡಿಸಿದ್ದು, ಬಹುತೇಕ ಜನಜೀವನ ಎಂದಿನಂತೆ ಸಾಗುತ್ತಿದೆ.

ಇದನ್ನೂ ಓದಿ: ತೆಲಂಗಾಣ : ವಿಷಕಾರಿ ಹಾವನ್ನು ಕೊರಳಿಗೆ ಸುತ್ತಿಕೊಂಡು ಮುತ್ತಿಟ್ಟವನ ಸ್ಥಿತಿ ಗಂಭೀರ

ಆದ್ರೆ, ಸರ್ಕಾರ ಮುಂದುವರೆಸಿರುವ ನೈಟ್ ಕರ್ಫ್ಯೂ ಕಲಾ ವಲಯದವರ ಸಂಕಷ್ಟಕ್ಕೆ ಕಾರಣವಾಗಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಸರ್ಕಾರ ವಿಧಿಸಿದ ಕಠಿಣ ಕ್ರಮಗಳಿಂದಾಗಿ ಉತ್ತರಕನ್ನಡ ಜಿಲ್ಲೆಯಾದ್ಯಂತ ಸ್ಥಗಿತಗೊಂಡಿದ್ದ ನಾಟಕ, ಯಕ್ಷಗಾನದಂತಹ ಸಾಂಸ್ಕೃತಿಕ ಕಲೆಗಳನ್ನ ಮತ್ತೆ ಪ್ರಾರಂಭಿಸಲು ಅವಕಾಶವೇ ಸಿಗದಂತಾಗಿದೆ.

ಸಾಂಸ್ಕೃತಿಕ ಕಲೆ ಪ್ರದರ್ಶನ

ಜನವರಿ ತಿಂಗಳು ಬಂತೆಂದರೆ ಸಾಕು ಜಿಲ್ಲೆಯ ವಿವಿಧೆಡೆ ಹಲವಾರು ಜಾತ್ರೆಗಳು ಪ್ರಾರಂಭವಾಗುತ್ತವೆ. ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಹತ್ತು ಹಲವು ಜಾತ್ರೆಗಳು ನಡೆಯುವುದರಿಂದ ಕಲಾ ತಂಡಗಳಿಗೆ ಮೂರು ತಿಂಗಳುಗಳ ಕಾಲ ಉತ್ತಮ ಕೆಲಸ ಸಿಗುತ್ತಿತ್ತು. ಆದ್ರೆ, ಕಳೆದೆರಡು ವರ್ಷಗಳಿಂದ ಕೊರೊನಾ ಅಟ್ಟಹಾಸಕ್ಕೆ ಕಲಾವಿದರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ಕಾರಣಕ್ಕೆ ಕಳೆದೆರಡು ವರ್ಷಗಳಿಂದ ಯಾವುದೇ ರೀತಿಯ ನಾಟಕ, ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಅವಕಾಶವೇ ಸಿಕ್ಕಿಲ್ಲ. ಈ ಬಾರಿ ಕೊರೊನಾ ಕೊಂಚ ಇಳಿಕೆಯಾಗಿರುವ ಹಿನ್ನೆಲೆ, ಸರಳವಾಗಿ ಜಾತ್ರೆಗಳನ್ನ ನಡೆಸಲು ಅವಕಾಶ ನೀಡಲಾಗಿದೆಯಾದ್ರೂ ನೈಟ್ ಕರ್ಫ್ಯೂ ಇರುವ ಹಿನ್ನೆಲೆ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಗಳನ್ನ ನಡೆಸಲು ಅವಕಾಶ ಇಲ್ಲ. ಇದರಿಂದಾಗಿ ಕಲೆಯನ್ನೇ ನಂಬಿಕೊಂಡಿದ್ದ ಕಲಾವಿದರು ದುಡಿಮೆಯಿಲ್ಲದೇ ಖಾಲಿ ಕೂರುವಂತಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಜಿಲ್ಲೆಯಾದ್ಯಂತ ಸಾವಿರಕ್ಕೂ ಅಧಿಕ ಕಲಾವಿದರ ತಂಡಗಳಿವೆ. 15 ಸಾವಿರಕ್ಕೂ ಅಧಿಕ ಕಲಾವಿದರು ನಾಟಕ, ಯಕ್ಷಗಾನ, ಜಾನಪದ ನೃತ್ಯ, ಸಂಗೀತ ಸೇರಿದಂತೆ ವಿವಿಧ ಬಗೆಯ ಕಲೆಯನ್ನ ಪ್ರದರ್ಶನ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ಜಾತ್ರೆ, ಉತ್ಸವದಂತಹ ಸಂದರ್ಭಗಳಲ್ಲಿಯೇ ಬಹುತೇಕ ಕಲಾ ತಂಡಗಳಿಗೆ ತಮ್ಮ ಕಲೆಯನ್ನ ಪ್ರದರ್ಶಿಸಲು ಅವಕಾಶ ಸಿಗುತ್ತಿತ್ತು. ಜೊತೆಗೆ ಕೇವಲ ಕಲಾವಿದರು ಮಾತ್ರವಲ್ಲದೇ ಇವರೊಂದಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ರಂಗ ಪರಿಕರದವರು, ಸಂಗೀತಗಾರರು, ವಾದ್ಯ ಮೇಳದವರು ಸೇರಿದಂತೆ ಹತ್ತು ಹಲವು ವಿಭಾಗಗಳಿಗೂ ಇದರಿಂದ ಕೆಲಸ ಸಿಗುತ್ತಿತ್ತು.

ಆದ್ರೆ, ಕೊರೊನಾ ಕಾರಣದಿಂದ ಸಾಂಸ್ಕೃತಿಕ ಕಲೆ ಪ್ರದರ್ಶನಕ್ಕೆ ಅವಕಾಶ ಇಲ್ಲವಾಗಿರೋದು ಕಲಾವಿದರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಸರ್ಕಾರ ನೈಟ್ ಕರ್ಫ್ಯೂ ಕೈಬಿಡಬೇಕು, ಇಲ್ಲವಾದಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಕಲೆ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಅಂತಾ ಕಲಾವಿದರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ABOUT THE AUTHOR

...view details