ಕಾರವಾರ(ಉತ್ತರ ಕನ್ನಡ):ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು 1.25 ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ ಮೂವರು ಆರೋಪಿಗಳನ್ನು ವಶಪಡೆದಿರುವ ಘಟನೆ ಕುಮಟಾ ನಗರದ ರೈಲ್ವೆ ಸ್ಟೇಷನ್ ಬಳಿ ಮಂಗಳವಾರ ನಡೆದಿದೆ.
ಶಿರಸಿ ಮೂಲದ ವಿನಾಯಕ ಕೆಂಪಣ್ಣ ಕರ್ನಿಂಗ, ನಿಖಿಲ ಮಾದೇವ ಅಂಬಿಗ ಹಾಗೂ ಭಟ್ಕಳ ಮೂಲದ ಸಮಿ ಅಬ್ಬಾಸ್ ಬಂಧಿತ ಆರೋಪಿಗಳಗಿದ್ದಾರೆ. ರೈಲ್ವೆ ನಿಲ್ದಾಣದ ಬಳಿ ಗಾಂಜಾ ಮಾರುವ ಖಚಿತ ಮಾಹಿತಿ ಮೇರೆಗೆ ಕುಮಟಾ ಪೊಲೀಸರು ದಾಳಿ ನಡೆಸಿದರು. ದಾಳಿಯಲ್ಲಿ 1.25 ಲಕ್ಷ ರೂ ಮೌಲ್ಯದ 4.76 ಕೆ.ಜಿ ಗಾಂಜಾ ಹಾಗೂ ಸ್ಕೂಟಿ ವಶಪಡಿಸಿಕೊಳ್ಳಲಾಗಿದೆ.