ಶಿರಸಿ (ಉತ್ತರಕನ್ನಡ): ತಾಲೂಕಿನ ಬಾಳೆಗದ್ದೆ ಬಳಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಶಿರಸಿ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದೆ.
ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಮೂವರ ಬಂಧನ - ಉತ್ತರಕನ್ನಡ ಸುದ್ದಿ
ಶಿರಸಿ ತಾಲೂಕಿನ ಬಾಳೆಗದ್ದೆ ಬಳಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಮೂವರನ್ನು ಶಿರಸಿ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಬಂಧಿತರಿಂದ ಒಟ್ಟು 68 ಕೆ.ಜಿ. 875 ಗ್ರಾಂ ಶ್ರೀಗಂಧ ವಶಪಡಿಸಿಕೊಳ್ಳಲಾಗಿದೆ.
ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಮೂವರ ಬಂಧನ
ತಾಲೂಕಿನ ಬಾಳೆಗದ್ದೆಯ ಶಿವು ಭೋವಿವಡ್ಡರ್, ನೀರ್ನಳ್ಳಿಯ ಶ್ರೀಕಾಂತ ಭೋವಿವಡ್ಡರ್ ಹಾಗೂ ಸತೀಶ ಭೋವಿವಡ್ಡರ್ ಬಂಧಿತ ಆರೋಪಿಗಳು.
ಬಂಧಿತರಿಂದ ಒಟ್ಟು 68 ಕೆ.ಜಿ. 875 ಗ್ರಾಂ ಶ್ರೀಗಂಧ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.