ಕರ್ನಾಟಕ

karnataka

ETV Bharat / state

ಶಿಕ್ಷಕಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯ ಬಂಧನ - ಆರೋಪಿ ಬಂಧನ ಸುದ್ದಿ

ಆಗಸ್ಟ್​ 31ರಂದು ಶಿಕ್ಷಕಿಯ ಮನೆಯ ಹಿಂಬಾಗಿಲಿನಿಂದ ಪ್ರವೇಶ ಮಾಡಿ ಮಾನಕ್ಕೆ ಕುಂದನ್ನುಂಟು ಮಾಡಿದ್ದ. ಗಂಡನನ್ನು ಬಿಟ್ಟು ಬಾ ಎಂದು ಕರೆದು, ಕಿರುಕುಳ ನೀಡಿದ್ದ ಎಂದು ಶಿಕ್ಷಕಿ ದೂರು ದಾಖಲಿಸಿದ್ದಾಳೆ.

ಶಿಕ್ಷಕಿಗೆ ಕಿರುಕುಳ ನೀಡುತ್ತಿದ್ದ ಆರೋಪಿ ಬಂಧನ
ಶಿಕ್ಷಕಿಗೆ ಕಿರುಕುಳ ನೀಡುತ್ತಿದ್ದ ಆರೋಪಿ ಬಂಧನ

By

Published : Sep 2, 2020, 8:53 AM IST

ಶಿರಸಿ:ವಿವಾಹಿತ ಶಿಕ್ಷಕಿಯೋರ್ವಳಿಗೆ ಲೈಂಗಿಕವಾಗಿ ದೌರ್ಜನ್ಯ ಎಸಗಿ ನಂತರ ಜನರು ಸೇರುತ್ತಿದ್ದಂತೆ ತನಗೆ ತಾನೇ ಚಾಕು ಚುಚ್ಚಿಕೊಂಡು ದೊಡ್ಡ ನಾಟಕ ಮಾಡಿದ್ದ ಆರೋಪಿಯನ್ನು ಬನವಾಸಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರದ ಶಿವಕುಮಾರ ಕರಿಕಲ್ಮನಿ ಬಂಧಿತ ಆರೋಪಿ. ವಿಜಯಪುರದಲ್ಲಿ ಈತನಿಗೆ ಶಿಕ್ಷಕಿಯ ಪರಿಚಯವಾಗಿತ್ತು. ನಂತರ ಶಿಕ್ಷಕಿ ಶಿರಸಿಗೆ ವರ್ಗಾವಣೆಗೊಂಡು 9 ವರ್ಷವಾಗಿತ್ತು. ಹೀಗಿರುವಾಗ ಒಮ್ಮೆ ಆರೋಪಿಯು ಇಲ್ಲಿಯ ಯಲ್ಲಾಪುರ ನಾಕಾ ಸರ್ಕಲ್ ಬಳಿ ಬಂದು ಶಿಕ್ಷಕಿಯ ಕೈ ಹಿಡಿದು ಅವಳ ಬಟ್ಟೆ ಹರಿದು ಹಾಕಿದ್ದರಿಂದ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಳು. ಆಗ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದರು.

ನಂತರ ಬಿಡುಗಡೆಗೊಂಡ ಮೇಲೆ ಹಳೇ ದ್ವೇಷದಿಂದ ಆರೋಪಿಯು ಆಗಸ್ಟ್​ 31ರಂದು ಶಿಕ್ಷಕಿಯ ಮನೆಯ ಹಿಂಬಾಗಿಲಿನಿಂದ ಪ್ರವೇಶ ಮಾಡಿ ಮಾನಕ್ಕೆ ಕುಂದನ್ನುಂಟು ಮಾಡಿದ್ದ. ಗಂಡನನ್ನು ಬಿಟ್ಟು ಬಾ ಎಂದು ಕರೆದು, ಕಿರುಕುಳ ನೀಡಿದ್ದ ಎಂದು ಶಿಕ್ಷಕಿ ದೂರು ದಾಖಲಿಸಿದ್ದಾಳೆ. ಈ ಸಂಬಂಧ ಬನವಾಸಿ ಠಾಣೆಯಲ್ಲಿ ದೂರು ದಾಖಲಾಗಿದೆ‌.

ABOUT THE AUTHOR

...view details