ಭಟ್ಕಳ : ತಾಲೂಕಿನ ಸಾಗರ ರಸ್ತೆಯ ಗುಳ್ಮಿ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ಅಕ್ರಮ್ ಬಂಧಿತ ಆರೋಪಿ. ಆರೋಪಿ ಶನಿವಾರದಂದು ಭಟ್ಕಳದ ಸಾಗರ ರಸ್ತೆಯ ಗುಳ್ಮಿ ಕ್ರಾಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸುಮಾರು 84.450 ಗ್ರಾಂ ತೂಕದ ಒಣಗಿದ ಗಾಂಜಾವನ್ನ ಮಾರಾಟ ಮಾಡುತ್ತಿದ್ದಾಗ ಬಂಧಿಸಿಲಾಗಿದೆ.