ಕರ್ನಾಟಕ

karnataka

ETV Bharat / state

ಸಮುದ್ರದಾಳದಲ್ಲೂ ಗಂಧದಗುಡಿ ಸಿನೆಮಾ ಪ್ರಚಾರ.. ಅಭಿಮಾನ ಮೆರೆದ ಅಪ್ಪು ಫ್ಯಾನ್​ - ಸಮುದ್ರದಾಳದಲ್ಲೂ ಗಂಧದಗುಡಿ ಸಿನೆಮಾ ಪ್ರಚಾರ

ದಿ. ಪುನೀತ್​ ರಾಜ್​ಕುಮಾರ್​ ಅಭಿನಯದ ಗಂಧದ ಗುಡಿ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದ್ದು, ಅಪ್ಪು ಅವರ ಅಭಿಮಾನಿಯೊಬ್ಬರು ಮುರುಡೇಶ್ವರ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್​ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

appu-fan-did-scuba-diving-in-murudeshwar-for-gandhadagudi
ಸಮುದ್ರದಾಳದಲ್ಲಿಯೂ ಗಂಧದಗುಡಿ ಸಿನೆಮಾ ಪ್ರಚಾರ: ಅಭಿಮಾನ ಮೆರೆದ ಅಪ್ಪು ಅಭಿಮಾನಿ

By

Published : Oct 24, 2022, 11:45 AM IST

ಕಾರವಾರ(ಉತ್ತರ ಕನ್ನಡ): ದಿ.ಪುನೀತ್ ರಾಜಕುಮಾರ್​ ಅವರು ನಟಿಸಿರುವ ಗಂಧದಗುಡಿ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದ್ದು, ಅವರ ಅಭಿಮಾನಿಯೊಬ್ಬರು ಗಂಧದಗುಡಿ ಪೋಸ್ಟರ್ ಹಿಡಿದು ಭಟ್ಕಳದ ಮುರುಡೇಶ್ವರದಲ್ಲಿ ಸಮುದ್ರದ ಆಳದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ಸ್ ಸಹಯೋಗದಲ್ಲಿ ಅಪ್ಪು ನಟಿಸಿರುವ ಗಂಧದಗುಡಿ ಚಿತ್ರದ ಪ್ರಚಾರ ಕಾರ್ಯ ಕೈಗೊಂಡಿರುವ ಬೆಂಗಳೂರು ಮೂಲದ ಅಭಿಮಾನಿ ವನ್ಯಜೀವಿ ಮತ್ತು ಸಮುದ್ರ ಜೀವಿಗಳನ್ನು ರಕ್ಷಿಸಿ ಎನ್ನುವ ಸಂದೇಶದೊಂದಿಗೆ ಪುನೀತ್​ ರಾಜ್​ಕುಮಾರ್ ಅವರ ಭಾವಚಿತ್ರ ಒಳಗೊಂಡ ಗಂಧದಗುಡಿ ಫೋಟೋವನ್ನು ಸಮುದ್ರದಾಳದಲ್ಲಿ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಸಮುದ್ರದ ಆಳದಲ್ಲೂ ಗಂಧದಗುಡಿ ಚಿತ್ರದ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.

ಈ ಹಿಂದೆ ಗಂಧದಗುಡಿ ಚಿತ್ರೀಕರಣ ಸಂದರ್ಭದಲ್ಲಿ 2021ರ ಫೆಬ್ರುವರಿಯಲ್ಲಿ ಮುರುಡೇಶ್ವರಕ್ಕೆ ಆಗಮಿಸಿದ್ದ ಪುನೀತ್ ರಾಜಕುಮಾರ್​ ಸ್ಕೂಬಾ ಡೈವಿಂಗ್ ಮಾಡಿದ್ದರು. ಆಳಸಮುದ್ರದಲ್ಲಿ ಕಡಲಜೀವಿಗಳನ್ನು ಕಣ್ತುಂಬಿಕೊಂಡಿದ್ದರು. ಸ್ಕೂಬಾ ಡೈವ್​ ಮಾಡಿದ್ದು ಹೊಸ ಅನುಭವವನ್ನು ನೀಡಿದೆ. ಮುಂದಿನ ಬಾರಿ ಕುಟುಂಬ ಸದಸ್ಯರೊಂದಿಗೆ ಬಂದು ಸ್ಕೂಬಾ ಡೈವಿಂಗ್​ ಮಾಡುವುದಾಗಿ ಪುನೀತ್ ಹೇಳಿದ್ದರು.

ಸಮುದ್ರದಾಳದಲ್ಲಿಯೂ ಗಂಧದಗುಡಿ ಸಿನೆಮಾ ಪ್ರಚಾರ: ಅಭಿಮಾನ ಮೆರೆದ ಅಪ್ಪು ಅಭಿಮಾನಿ

ಸ್ಕೂಬಾ ಮಾಡುವ ಸಂದರ್ಭದಲ್ಲಿ ಅಷ್ಟು ದೊಡ್ಡ ನಟರಾಗಿದ್ದರೂ ಅವರು ಸರಳವಾಗಿ ಇರುತ್ತಿದ್ದರು. ದುರದೃಷ್ಟವಸಾತ್ ಅವರು ಇದೀಗ ಇಲ್ಲ. ಆದರೆ ಅವರ ನೆನಪುಗಳು ಸ್ಮರಣೀಯವಾಗಿವೆ. ಇದೀಗ ಅವರ ಅಭಿಮಾನಿ ಸ್ಕೂಬಾ ಡೈವಿಂಗ್ ಮೂಲಕ ಸಮುದ್ರದಾಳದಲ್ಲಿ ಗಂಧದಗುಡಿ ಸಿನೆಮಾದ ಪೋಸ್ಟರ್ ಬಿಡುಗಡೆ ಮಾಡಿ ಪ್ರಚಾರ ನಡೆಸಿದ್ದಾರೆ. ಸಿನೆಮಾವನ್ನು ಎಲ್ಲರೂ ನೋಡಬೇಕು ಎಂದು ನೇತ್ರಾಣಿ ಅಡ್ವೆಂಚರ್ಸ್ ಮಾಲೀಕರಾದ ಗಣೇಶ ಹರಿಕಂತ್ರ ಮನವಿ ಮಾಡಿದರು.

ಇದನ್ನೂ ಓದಿ :ಪುನೀತ್ ನಟ ಅಷ್ಟೇ ಆಗಿರಲಿಲ್ಲ,​ ಪರಿಸರ ಪ್ರೇಮಿ ಕೂಡ ಆಗಿದ್ದರು: ಅಪ್ಪು ಬಗ್ಗೆ ಪ್ರಕಾಶ್​ ರೈ ಮಾತು

ABOUT THE AUTHOR

...view details