ಭಟ್ಕಳ: ತಾಲೂಕಿನ ಮನೆಮನೆಗಳಲ್ಲಿ ಕೋವಿಡ್-19 ಭಯದ ವಾತಾವರಣ ಸೃಷ್ಟಿಯಾಗಿದ್ದು, ಜನರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಮಾನಸಿಕ ಒತ್ತಡದಿಂದ ತಾಲೂಕಿನ ಜನತೆ ಹೊರಬರುವಂತೆ ಮಾಡಬೇಕು ಎಂದು ಭಟ್ಕಳ ಅಲ್-ಫಲಾ ಯೂತ್ ಸರ್ವಿಸ್ ಆರ್ಗನೈಜೇಶನ್ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೋವಿಡ್ನಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಜನರಿಗೆ ಧೈರ್ಯ ತುಂಬಬೇಕು - Bhatkala
ತಾಲೂಕಿನ ಮನೆಮನೆಗಳಲ್ಲಿ ಕೋವಿಡ್-19 ಭಯದ ವಾತಾವರಣ ಸೃಷ್ಟಿಯಾಗಿದ್ದು ಜನರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆ ಅವರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಆಗಬೇಕು ಎಂದು ಅಲ್-ಫಲಾ ಯೂತ್ ಸರ್ವಿಸ್ ಆರ್ಗನೈಜೇಶನ್ ಅಭಿಪ್ರಾಯಪಟ್ಟಿದೆ.

ಆರೋಗ್ಯ, ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಆಕ್ಸಿಜನ್ ಲೆವಲ್ ತಪಾಸಣೆ ನೆಪದಲ್ಲಿ ಪರೀಕ್ಷೆ ಮಾಡುತ್ತಿರುವುದು ಜನರಲ್ಲಿ ಇನ್ನಷ್ಟು ಭಯ ನಿರ್ಮಾಣವಾಗಲು ಕಾರಣವಾಗಿದೆ. ಈಗಾಗಲೇ ಕೋವಿಡ್-19 ಪರೀಕ್ಷೆಯಲ್ಲಿ ಬಹಳಷ್ಟು ತಪ್ಪು ಸಂದೇಶಗಳು ಹರಡುತ್ತಿದ್ದಂತೆ ಇಲ್ಲಿಯೂ ಕೂಡ ಕುಂದುಕೊರತೆಗಳನ್ನು ಮಜಿರೆಯ ಜನರು ಕಂಡುಕೊಂಡಿದ್ದಾರೆ. ಈಗಾಗಲೇ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಇದೆ ಎಂದು ಮನೆಗೆ ಕಳುಹಿಸಿದವರಿಗೆ ಮತ್ತೆ ಕರೆ ಮಾಡಿ ನಿಮಗೆ ಪಾಸಿಟಿವ್ ಇದೆ ಎಂದು ಹೇಳುತ್ತಿದ್ದಾರೆ. ಸುರಕ್ಷಿತವಾಗಿದ್ದವರಿಗೆ ಸರ್ಕಾರಿ ಆಸ್ಪತ್ರೆಯಿಂದ ಕರೆ ಬರುತ್ತಿದ್ದಂತೆ ಒಮ್ಮೆಲೆ ಅಸ್ವಸ್ಥರಾಗುವ ಪ್ರಸಂಗ ಎದುರಾಗುತ್ತಿದೆ ಎಂದರು.
ಈ ರೀತಿಯ ತಪ್ಪು ಮಾಹಿತಿಯಿಂದ ಜನರು ಭಯದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ. ಈಗ ಜನರಲ್ಲಿ ಭಯದ ವಾತಾವರಣ ತೆಗೆದುಹಾಕಬೇಕಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಮಾನವೀಯತೆಯಿಂದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೇ ವಿನಃ ತಪ್ಪು ತಪ್ಪು ವರದಿ ನೀಡುವ ಮಷಿನ್ಗಳನ್ನು ಮನೆ ಬಾಗಿಲಿಗೆ ಕಳುಹಿಸಿ, ಜನರಲ್ಲಿ ಇನ್ನಷ್ಟು ಭಯ ಮೂಡಿಸುವುದು ಸರಿಯಲ್ಲ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.