ಕರ್ನಾಟಕ

karnataka

ETV Bharat / state

ಭಟ್ಕಳ ಎಸ್ಪಿ ನಿಖಿಲ್​ ವರ್ಗಾವಣೆ ವಿರುದ್ಧ ಸಿಡಿದೆದ್ದ ನಾಗರಿಕರು: ಮರು ನೇಮಕಗೊಳಿಸಲು ಮನವಿ - ಸಹಾಯಕ ಆಯುಕ್ತರಿಗೆ ಮನವಿ

ನಿಷ್ಠಾವಂತ ಅಧಿಕಾರಿಯಾದ ಎಎಸ್ಪಿ ನಿಖಿಲ್ ಈ ಹಿಂದೆ ಭಟ್ಕಳದಲ್ಲಿ ನಡೆಯುತ್ತಿರುವ ಅಫೀಮು, ಗಾಂಜಾ, ಅಕ್ರಮ ಸಾರಾಯಿ ದಂಧೆಯನ್ನು ಮಟ್ಟ ಹಾಕಿದ್ದರು. ಹಾಗೆಯೇ ಸಾರ್ವಜನಿಕರ ನೆಚ್ಚಿನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು, ಇವರ ವರ್ಗಾವಣೆಯನ್ನು ಹಿಂಪಡೆಯದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

By

Published : Oct 11, 2019, 10:15 AM IST

ಭಟ್ಕಳ: ತಾಲೂಕಿನ ಕೆಲವು ನಾಗರಿಕರು ಸೇರಿ ಎಎಸ್ಪಿ ನಿಖಿಲ್ ವರ್ಗಾವಣೆಯನ್ನು ವಿರೋಧಿಸಿ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ನಿಷ್ಠಾವಂತ ಅಧಿಕಾರಿಯಾದ ಎಎಸ್ಪಿ ನಿಖಿಲ್ ಈ ಹಿಂದೆ ಭಟ್ಕಳದಲ್ಲಿ ನಡೆಯುತ್ತಿರುವ ಅಫೀಮು, ಗಾಂಜಾ, ಅಕ್ರಮ ಸಾರಾಯಿ ದಂಧೆಯನ್ನು ಮಟ್ಟ ಹಾಕಿದ್ದರು. ಹಾಗೆಯೇ ಸಾರ್ವಜನಿಕರ ನೆಚ್ಚಿನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು

ಇವರ ನಿಷ್ಠಾವಂತ ಸೇವೆಯನ್ನು ಸಹಿಸದೆ ರಾಜಕೀಯ ಪಿತೂರಿಯಿಂದಾಗಿ ವರ್ಗಾವಣೆ ಮಾಡಲು ಮುಂದಾಗಿದ್ದಾರೆ ರಾಜಕಾರಣಿಗಳ ಈ ಕ್ರಮವನ್ನು ಭಟ್ಕಳದ ಸಮಸ್ತ ನಾಗರಿಕರು ಖಂಡಿಸುತ್ತಿದ್ದು. ಈ ಕೂಡಲೇ ವರ್ಗಾವಣೆಯನ್ನು ರದ್ದುಪಡಿಸದೆ ಇದ್ದಲ್ಲಿ ಭಟ್ಕಳದ ಹಲವು ಸಂಘಟನೆಯ ಮೇರೆಗೆ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂದರ್ಭದಲ್ಲಿ ಅಭಿಷೇಕ್ ನಾಯ್ಕ, ರಾಘವೇಂದ್ರ ನಾಯ್ಕ, ವಾಸು ನಾಯ್ಕ ಸರ್ಪನಕಟ್ಟೆ, ಶಿವರಾಜ ನಾಯ್ಕ, ತುಳುಸಿದಾಸ, ಶ್ರೀನಿವಾಸ ನಾಯ್ಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ABOUT THE AUTHOR

...view details