ಕಾರವಾರ:ಮಹಾರಾಷ್ಟ್ರದಿಂದ ವಾಪಸಾದ ಉತ್ತರಕನ್ನಡ ಜಿಲ್ಲೆಯ ಇಬ್ಬರಲ್ಲಿ ಇಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಉತ್ತರಕನ್ನಡಕ್ಕೂ ವಕ್ಕರಿಸಿತು ಮಹಾರಾಷ್ಟ್ರ ನಂಜು: ಇಂದು ಮತ್ತೆರಡು ಕೊರೊನಾ ಕೇಸ್ ಪತ್ತೆ - ಕೊರೊನಾ ಕೇಸ್ ಪತ್ತೆ ಉತ್ತರಕನ್ನಡ
ಉತ್ತರ ಕನ್ನಡ ಜಿಲ್ಲೆಯಲ್ಲಿನ ಭಟ್ಕಳ ತಾಲೂಕಿಗೆ ಅಂಟಿದ್ದ ಕೊರೊನಾ ಇದೀಗ ಜಿಲ್ಲಾದ್ಯಂತ ಹರಡಿದ್ದು, ಮಹಾರಾಷ್ಟ್ರದಿಂದ ಆಗಮಿಸಿದ್ದ ಇಬ್ಬರಲ್ಲಿ ಕೊರೊನಾ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ.
ಉತ್ತರಕನ್ನಡ
ಮಹಾರಾಷ್ಟ್ರದಿಂದ ವಾಪಸಾದ ದಾಂಡೇಲಿ ಮೂಲದ 35 ವರ್ಷದ ಮಹಿಳೆಗೆ ಹಾಗೂ ಕಾರವಾರ ಮೂಲದ 38 ವರ್ಷದ ಪುರುಷ ನೊಬ್ಬನಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದ ಈ ಇಬ್ಬರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ನಂತರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ಖಚಿತವಾಗಿದೆ.
ಈ ಎರಡು ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆಯಾಗಿದ್ದು, ಇದುವರೆಗೆ 43 ಮಂದಿ ಗುಣಮುಖರಾಗಿದ್ದಾರೆ.