ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಮಳೆಯು ತಗ್ಗಿದ್ದು, ಕಾಳಿ, ಅಘನಾಶಿನಿ, ಗಂಗಾವಳಿ, ಶರಾವತಿ ನದಿ ಪಾತ್ರದ ಗ್ರಾಮಸ್ಥರು ತಮ್ಮ ಮನೆಗಳಿಗೆ ವಾಪಾಸ್ಸಾಗುತ್ತಿದ್ದಾರೆ. ಆದರೆ ನೀರಿನೊಂದಿಗೆ ಬಂದಿರುವ ವಿಷಜಂತುಗಳು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿವೆ.
ಮನೆಗೆ ಮರಳಿದ ನೆರೆ ಸಂತ್ರಸ್ತರಿಗೆ ಶಾಕ್... ಮನೆಯೊಳಗಿದ್ದವು ಹೆಬ್ಬಾವು, ಕಾಳಿಂಗ ಸರ್ಪ - snakes inside flood hit house
ಪ್ರವಾಹದ ಬಳಿಕ ಕಾಳಿ, ಅಘನಾಶಿನಿ, ಗಂಗಾವಳಿ, ಶರಾವತಿ ನದಿ ಪಾತ್ರದ ಗ್ರಾಮಸ್ಥರು ತಮ್ಮ ಮನೆಗಳಿಗೆ ವಾಪಾಸ್ಸಾಗುತ್ತಿದ್ದಾರೆ. ಆದರೆ, ನೀರಿನ ಜತೆ ಬಂದಿರುವ ಉರಗ, ಮೊಸಳೆ, ವಿಷ ಜಂತುಗಳು ಮನೆಯೊಳಗೆ ವಾಸ್ತವ್ಯ ಹೂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ.
ನೆರೆ ಹಾವಳಿ ಜೊತೆಗೆ ತೇಲಿ ಬಂದ ವಿಷ ಜಂತುಗಳು
ಹೌದು ಪ್ರವಾಹದಿಂದ ಕಂಗೆಟ್ಟ ಜನರಿಗೆ ಈಗ ಮತ್ತೊಂದು ಶಾಕ್ ಕಾದಿದೆ. ಕಾಳಜಿ ಕೇಂದ್ರದಿಂದ ಮನೆಗೆ ಬಂದ ಜನ ಮಳೆಯೊಳಗೆ ವಾಸ ಶುರು ಮಾಡಿದ ಬೃಹತ್ ಗಾತ್ರದ ಉರಗಗಳನ್ನು ಕಂಡು ಹೌಹಾರಿದ್ದಾರೆ. ಕಾಳಿ ನದಿ ಪ್ರವಾಹದಿಂದ ಜಲಾವೃತವಾದ ವೈಲುವಾಡ ಗ್ರಾಮದಲ್ಲಿ ಕಾಳಿಂಗ ಸರ್ಪ, ಹೆಬ್ಬಾವು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಹಾವುಗಳನ್ನು ಹಿಡಿಯಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಪ್ರವಾಹ ಪರಿಸ್ಥಿತಿ ಕಡಿಮೆಯಾದರೂ, ನೆರೆ ಸಂತ್ರಸ್ತರಿಗೆ ನೆಮ್ಮದಿ ಇಲ್ಲದಂತಾಗಿದೆ.