ಕರ್ನಾಟಕ

karnataka

ETV Bharat / state

ಟ್ಯಾಗೋರ್‌ ಕಡಲತೀರದಲ್ಲಿ ಅಳಿವಿನಂಚಿನಲ್ಲಿರುವ ಮತ್ತೊಂದು ಕಡಲಾಮೆ ಕಳೇಬರ ಪತ್ತೆ - ಕಾರವಾರದಲ್ಲಿ ಕಡಲಾಮೆ

ಗ್ರೀನ್ ಸೀ (Chelonia mydas) ಎಂದು ಕರೆಯಲ್ಪಡುವ ಈ ಆಮೆಯ ಕಳೇಬರ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ದೊರೆತಿದೆ. ಕೆಲವೇ ದಿನಗಳ ಹಿಂದೆ ಇದೇ ಜಾತಿಯ ಎರಡು ಆಮೆಯ ಕಳೇಬರ ಇಲ್ಲಿ ಪತ್ತೆಯಾಗಿತ್ತು.

ಕಡಲಾಮೆ ಕಳೆಬರ ಪತ್ತೆ
ಕಡಲಾಮೆ ಕಳೆಬರ ಪತ್ತೆ

By

Published : Sep 10, 2021, 7:07 PM IST

ಕಾರವಾರ:ಕರ್ನಾಟಕದ ಕರಾವಳಿಯಲ್ಲಿ ಅಪರೂಪವಾಗಿ ಕಾಣಸಿಗುವ ಗ್ರೀನ್ ಸಿ ಆಮೆಯ ಮತ್ತೊಂದು ಕಳೇಬರ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ದೊರೆತಿದೆ.

ಕಡಲಾಮೆ ಕಳೆಬರ

ಕಡಲಾಮೆಯ ವಿಶೇಷತೆ:

ಗ್ರೀನ್ ಸೀ ಎಂದು ಕರೆಯಲ್ಪಡುವ ಈ ಆಮೆ ಸಸ್ಯಹಾರಿ. ಸಾಮಾನ್ಯವಾಗಿ ಪೆಸಿಫಿಕ್ ಸಾಗರದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸಮುದ್ರಜೀವಿಯ ವಿಶೇಷ ದೇಹರಚನೆಯಿಂದಾಗಿ ಇವುಗಳನ್ನು ಪ್ರತ್ಯೇಕವಾಗಿ ಗುರುತಿಸಬಹುದಾಗಿದೆ. ಇದರ ಮುಖ ದುಂಡಗಿದೆ. ಸಮುದ್ರದಲ್ಲಿ ಬೆಳೆಯುವ ಪಾಚಿ, ಹುಲ್ಲು ತಿನ್ನಲು ಬೇಕಾದ ವ್ಯವಸ್ಥೆಗೆ ಬೇಕಾದಂತೆ ದೇಹರಚನೆಯನ್ನು ಕಾಣಬಹುದು. ಆಮೆಯು 110 ರಿಂದ 190 ಕೆ.ಜಿವರೆಗೂ ತೂಕವಿರುತ್ತದೆ. 8 ರಿಂದ 10 ಇಂಚು ಉದ್ದವಾಗಿ ಬೆಳೆಯುತ್ತದೆ. ದೇಹದ ಮೇಲ್ಭಾಗದ ಅಂಗರಚನೆಯೂ ವಿಶೇಷವಾಗಿದ್ದು ಸ್ಲೋಪಿನಂತಿದೆ. ಇವು ಎರಡು ವರ್ಷಗಳಿಗೊಮ್ಮೆ ಮಾತ್ರ ಗೂಡುಕಟ್ಟಿ ಮೊಟ್ಟೆಯಿಡುತ್ತವೆ. ಇವುಗಳ ಸಂತತಿ ಸದ್ಯ ಅಳಿವಿನಂಚಿನಲ್ಲಿದೆ.

ಕಾರವಾರದ ಕಡಲತೀರದಲ್ಲಿ ಪತ್ತೆಯಾದ ಕಡಲಾಮೆ ಕಳೆಬರದ ಪರಿಶೀಲನೆ

ಇದೀಗ ಪತ್ತೆಯಾದ ಆಮೆಯು ಮೀನುಗಾರರ ಬಲೆಗೆ ಸಿಲುಕಿ ಉಸಿರುಗಟ್ಟಿ ಸತ್ತಿರುವ ಸಾಧ್ಯತೆ ಇರಬಹುದು ಎಂದು ತಜ್ಞರು ಹೇಳುತ್ತಾರೆ. ಕಾರವಾರದ ಅರಣ್ಯಾಧಿಕಾರಿ ವಸಂತ್ ರೆಡ್ಡಿ, ಕೋಸ್ಟಲ್ ಮತ್ತು ಮರೈನ್ ಎಕೋ ಸಿಸ್ಟಮ್​ನ ವಲಯದ ಆರ್​ಎಫ್​ಒ ಪ್ರಮೋದ್, ಡಿಆರ್​ಎಫ್​ಒ ಚಂದ್ರಶೇಖರ, ನವೀನ್, ಮಹೇಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆಮೆಯ ಕಳೇಬರನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ:ದಾವಣಗೆರೆಯ ಮಕ್ಕಳಲ್ಲಿ ಡೆಂಘೀ ಸೇರಿ ವಿಚಿತ್ರ ಜ್ವರ

For All Latest Updates

ABOUT THE AUTHOR

...view details