ಕರ್ನಾಟಕ

karnataka

ETV Bharat / state

ರೈಲಿನಲ್ಲಿ ಪತ್ತೆಯಾದ ಅನಾಮಧೇಯ ಬ್ಯಾಗ್.. ಓಪನ್ ಮಾಡಿದಾಗ ಸಿಕ್ಕಿದ್ದು ಏನು ಗೊತ್ತಾ? - ಕಾರವಾರ ಗ್ರಾಮೀಣ ಪೊಲೀಸ್

ಮುಂಬೈ ಛತ್ರಪತಿ ಶಿವಾಜಿ ಟರ್ಮಿನಲ್‌ನಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್​ಪ್ರೆಸ್ ರೈಲು ಕಾರವಾರದ ಶಿರವಾಡ ಬಳಿ ನಿಂತಾಗ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ಸಾಜಿರ್ ಎಂಬುವರು ಲಗೇಜ್​ ಇಡುವ ಸ್ಥಳದಲ್ಲಿ 6.30 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ರೈಲಿನಲ್ಲಿ ಪತ್ತೆಯಾದ ಅನಾಮಧೇಯ ಬ್ಯಾಗ್

By

Published : Oct 2, 2019, 5:32 PM IST

ಕಾರವಾರ:ರೈಲಿನಲ್ಲಿ ಸಾಗಿಸುತ್ತಿದ್ದ ಅನುಮಾನಸ್ಪದ ಬ್ಯಾಗ್‌ವೊಂದನ್ನು ರೈಲ್ವೆ ಪೊಲೀಸರು ತಪಾಸಣೆ ನಡೆಸಿದ್ದು, ಬ್ಯಾಗ್​ನಲ್ಲಿ ಬರೊಬ್ಬರಿ 6.30 ಕೆಜಿ ತೂಕದ ಗಾಂಜಾ ಪತ್ತೆಯಾಗಿರುವ ಘಟನೆ ಕಾರವಾರದ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಮುಂಬೈ ಛತ್ರಪತಿ ಶಿವಾಜಿ ಟರ್ಮಿನಲ್‌ನಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್​ಪ್ರೆಸ್ ರೈಲು ಕಾರವಾರದ ಶಿರವಾಡ ಬಳಿ ನಿಂತಾಗ ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ಸಾಜಿರ್ ಅವರು ಸಾಮಾನ್ಯ ಬೋಗಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸೇನಾ ಬ್ಯಾಗಿನ ಬಣ್ಣದಂಥ ಬ್ಯಾಗೊಂದು ಲಗೇಜ್ ಇಡುವ ಜಾಗದಲ್ಲಿ ಪತ್ತೆಯಾಗಿದೆ. ಬ್ಯಾಗಿನ ವಾರಸುದಾರರು ಯಾರೆಂದು ಪ್ರಯಾಣಿಕರನ್ನು ಪ್ರಶ್ನಿಸಿದಾಗ ಯಾರೂ ಕೂಡ ಪ್ರತಿಕ್ರಿಯೆ ನೀಡಲಿಲ್ಲ.

ಆದರೆ, ಇದರಿಂದ ಅನುಮಾನಗೊಂಡ ಪೊಲೀಸರು ಬ್ಯಾಗ್‌ನ ತೆರೆದಾಗ ಗಮ್ ಟೇಪ್ ಸುತ್ತಿದ ಪೊಟ್ಟಣವೊಂದು ಕಂಡು ಬಂದಿದೆ. ಬಳಿಕ ತಕ್ಷಣ ನಿಲ್ದಾಣದಲ್ಲಿದ್ದ ರಕ್ಷಣಾ ದಳದ ಇನ್‌ಸ್ಪೆಕ್ಟರ್ ವಿನೋದಕುಮಾರ್, ಕಾನ್‌ಸ್ಟೆಬಲ್​ಗಳಾದ ಕೋಳೂರ್ ಹಾಗೂ ನರೇಂದರ್ ಅವರಿಗೆ ಮಾಹಿತಿ ನೀಡಿದ್ದರು. ಬಳಿಕ ಇಬ್ಬರು ಸಾಕ್ಷಿದಾರ ಪ್ರಯಾಣಿಕರೊಂದಿಗೆ ಬ್ಯಾಗ್‌ನ ಆರ್‌ಪಿಎಫ್ ಕಚೇರಿಗೆ ತಂದು ತೆರೆದಾಗ ಗಾಂಜಾ ಇರುವುದು ಗೊತ್ತಾಗಿದೆ. ಬಳಿಕ ಅದನ್ನು ತೂಕ ಹಾಕಿ ಗ್ರಾಮೀಣ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

ಅಲ್ಲದೆ ರೈಲ್ವೆ ಪೊಲೀಸರು ಮುಂದಿನ ನಿಲ್ದಾಣಗಳಿಗೂ ರೈಲಿನ ಬೋಗಿಗಳಿಗೆ ತಪಾಸಣೆಗೆ ಮಾಹಿತಿ ನೀಡಿದ್ದು, ಆರೋಪಿಗಳಿದ್ದರೆ ವಶಕ್ಕೆ ಪಡೆಯಲು ಸೂಚಿಸಲಾಗಿತ್ತು. ಆದರೆ, ಯಾರೂ ಪತ್ತೆಯಾಗಿಲ್ಲ. ನಿಲ್ದಾಣಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ನಡೆಸಲಾಗುವುದು. ಶಂಕಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅವರನ್ನು ಕರೆ ತಂದು ವಿಚಾರಣೆ ನಡೆಸಲಾಗುವುದು ಎಂದು ಇನ್​ಸ್ಪೆಕ್ಟರ್ ವಿನೋದಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details